Thursday, June 4, 2026
Homeಕರಾವಳಿಮಂಗಳೂರುಮಂಗಳೂರು: ತಾನು ಕೆಲಸ ಮಾಡುತ್ತಿದ್ದ ಟೈಲರಿಂಗ್‌ ಶಾಪ್‌ನಲ್ಲಿಯೇ ಕುಸಿದು ಬಿದ್ದು ನವವಿವಾಹಿತ ಸಾವು

ಮಂಗಳೂರು: ತಾನು ಕೆಲಸ ಮಾಡುತ್ತಿದ್ದ ಟೈಲರಿಂಗ್‌ ಶಾಪ್‌ನಲ್ಲಿಯೇ ಕುಸಿದು ಬಿದ್ದು ನವವಿವಾಹಿತ ಸಾವು

- Advertisement -
- Advertisement -

ಮಂಗಳೂರು: ತಾನು ಕೆಲಸ ಮಾಡುತ್ತಿದ್ದ ಟೈಲರಿಂಗ್‌ ಶಾಪ್‌ನಲ್ಲಿಯೇ ಕುಸಿದು ಬಿದ್ದು ನವವಿವಾಹಿತ ಸಾವನ್ನಪ್ಪಿರುವ ಘಟನೆ ಮಂಜನಾಡಿ ಗ್ರಾಮದಲ್ಲಿ ನಡೆದಿದೆ.

ಉಳ್ಳಾಲ ತಾಲೂಕಿನ ಮಂಜನಾಡಿ ಪೆರಡೆಯ ದಿ.ವೆಂಕಪ್ಪ ಹಾಗೂ ಪಾರ್ವತಿ ದಂಪತಿಯ ಪುತ್ರ ಭರತ್‌ (32) ಸಾವಿಗೀಡಾದ ಯುವಕ.ಮಂಗಳೂರು ನಗರದ ಫಾರಂ ಮಾಲ್‌ನಲ್ಲಿ ಟೈಲರ್‌ ವೃತ್ತಿ ಮಾಡುತ್ತಿದ್ದ ಭರತ್‌ ನಾಲ್ಕು ದಿನದ ಹಿಂದೆ ಆಘಾತಕಾರಿ ಸುದ್ದಿಯನ್ನು ಕೇಳಿ ಟೈಲರಿಂಗ್ ಶಾಪಿನಲ್ಲಿ ಕುಸಿದು ಬಿದ್ದಿದ್ದರು ಕೂಡಲೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ.

ಕಳೆದ ಎಪ್ರಿಲ್‌ ತಿಂಗಳ 22 ರಂದು ಭರತ್‌ ವಿವಾಹವಾಗಿದ್ದರರು. ಪತ್ನಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿದ್ದಾರೆ.

- Advertisement -

Latest News

error: Content is protected !!