Monday, August 31, 2026
Homeಕರಾವಳಿಉಡುಪಿಬೈಂದೂರು: ಕೊಸಳ್ಳಿ ಫಾಲ್ಸ್‌ನಲ್ಲಿ ನೀರಿಗಿಳಿದು ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಮೃತದೇಹ ಪತ್ತೆ

ಬೈಂದೂರು: ಕೊಸಳ್ಳಿ ಫಾಲ್ಸ್‌ನಲ್ಲಿ ನೀರಿಗಿಳಿದು ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಮೃತದೇಹ ಪತ್ತೆ

- Advertisement -
- Advertisement -

ಬೈಂದೂರು: ಕೊಸಳ್ಳಿ ಫಾಲ್ಸ್‌ನಲ್ಲಿ ವಿದ್ಯಾರ್ಥಿಯೊಬ್ಬ ನೀರುಪಾಲಾಗಿದ್ದು ಆತನ ಮೃತದೇಹ  ಇಂದು (ಶನಿವಾರ) ಬೆಳಗ್ಗೆ ಪತ್ತೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಎ.ಎಸ್.ಐ. ಕುಮಾರ್‌ ಶೆಟ್ಟಿ(೨೦) ಎಂಬುವರ ಪುತ್ರ ಚಿರಾಂತ್‌ ಶೆಟ್ಟಿ ಮೃತಪಟ್ಟ ಯುವಕ. ನಿನ್ನೆ ಸಂಜೆ ಗೆಳೆಯರೊಂದಿಗೆ ಫಾಲ್ಸ್‌ಗೆ ಬಂದಿದ್ದಾಗ ಸ್ನಾನಕ್ಕೆಂದು ಫಾಲ್ಸ್‌ಗೆ ಇಳಿದು ನಾಪತ್ತೆಯಾಗಿದ್ದ ಎನ್ನಲಾಗಿದೆ. ಇಂದು ಬೆಳಗ್ಗೆ ಮೃತದೇಹ ಪತ್ತೆಯಾಗಿದೆ. ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!