Friday, June 5, 2026
Homeಕರಾವಳಿಕೇರಳ; ಬಾವಿಗೆ ಬಿದ್ದ ಎರಡು ವರ್ಷದ ತಮ್ಮನನ್ನು ರಕ್ಷಿಸಿದ 8 ವರ್ಷದ ಅಕ್ಕ;ಪುಟ್ಟ ಪೋರಿಯ ಧೈರ್ಯಕ್ಕೆ...

ಕೇರಳ; ಬಾವಿಗೆ ಬಿದ್ದ ಎರಡು ವರ್ಷದ ತಮ್ಮನನ್ನು ರಕ್ಷಿಸಿದ 8 ವರ್ಷದ ಅಕ್ಕ;ಪುಟ್ಟ ಪೋರಿಯ ಧೈರ್ಯಕ್ಕೆ ಸಲಾಂ ಎಂದ ಜನ

- Advertisement -
- Advertisement -

ಕೇರಳ:ಬಾವಿಗೆ ಬಿದ್ದ ತನ್ನ ಎರಜು ವರ್ಷದ ತಮ್ಮನನ್ನು  ಎಂಟು ವರ್ಷದ ಅಕ್ಕ ರಕ್ಷಣೆ ಮಾಡಿದ ಘಟನೆ ಕೇರಳದ ಮಂಕಂಕುಝಿ ಕಳ್ಳಿತುಂಡಂ ಪರಂಗಮಕೂಟ ಎಂಬಲ್ಲಿ ನಡೆದಿದೆ.

ಇಲ್ಲಿನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿರುವ ಸನಲ್ ಮತ್ತು ಶಜಿಲಾ ದಂಪತಿಯ ಪುತ್ರ ಐವಾನ್ ಹಾಗೂ ಆತನ ಸಹೋದರಿಯರಾದ ದಿಯಾ ಮತ್ತು ದುನಿಯಾ ಅಂಗಳದಲ್ಲಿ ಆಡುತ್ತಿದ್ದರು.ಆಗ ಐವನ್ ಬಾವಿಯ ಬದಿಗೆ ಹೋಗಿ ಪೈಪ್ ಮೇಲೆ ಕಾಲಿಟ್ಟು ಮೇಲಕ್ಕೆತ್ತಿದಾಗ ತುಕ್ಕು ಹಿಡಿದ ಕಬ್ಬಿಣದ ಕವರ್ ನ ಮಧ್ಯ ಭಾಗ ಒಡೆದು 20 ಅಡಿ ಆಳಕ್ಕೆ ಬಿದ್ದಿದ್ದಾನೆ.

ತಮ್ಮನ ಕಿರುಚಾಟವನ್ನು ಕೇಳಿದ ದಿಯಾ ಪೈಪ್‌ನಿಂದ ಕೆಳಗೆ ಇಳಿದು ಪೈಪ್‌ನಲ್ಲಿಯೇ ನೇತಾಡುತ್ತಿದ್ದ ಇವಾನ್‌ನನ್ನು ಎತ್ತಿಕೊಂಡಿದ್ದಾಳೆ.ಮಾಹಿತಿ ತಿಳಿದು ಬಂದ ಸ್ಥಳೀಯ ಜನರು ಹಗ್ಗ ಬಳಸಿ ಬಾವಿಗೆ ಇಳಿದು ಮೊದಲು ಐವನ್‌ನನ್ನು ಮೇಲಕ್ಕೆ ಕರೆತಂದರು.ಬಾವಿಗೆ ಹಾಕಿದ್ದ ಹಗ್ಗವೇರಿ ದಿಯಾ ಕೂಡ ಹತ್ತಿದ್ದಾಳೆ. ತಲೆಗೆ ಸಣ್ಣಪುಟ್ಟ ಗಾಯಗಳಾಗಿರುವ ಇವಾನ್‌ನನ್ನು ಮೊದಲು ಜಿಲ್ಲಾಸ್ಪತ್ರೆಗೆ ಮತ್ತು ನಂತರ ಅಲಪ್ಪುಳ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ದಿಯಾ ವೆಟ್ಟಿಯಾರ್ ತನ್ಪನ್ಪಲ್ಲಿಕ್ಕುಟಂ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದಾಳೆ.ಬಾಲಕಿಯ ಸಾಹಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಪುಟ್ಟ ಪೋರಿಯ ಧೈರ್ಯಕ್ಕೆ ಎಲ್ಲರೂ ಸಲಾಂ ಎನ್ನುತ್ತಿದ್ದಾರೆ.

- Advertisement -

Latest News

error: Content is protected !!