Sunday, June 7, 2026
Homeಕರಾವಳಿಉಡುಪಿಉಡುಪಿ: ಈಜಲು ಹೋಗಿ ನೀರುಪಾಲಾಗಿದ್ದ ಇಬ್ಬರು ಯುವಕರ ಶವ ಪತ್ತೆ!

ಉಡುಪಿ: ಈಜಲು ಹೋಗಿ ನೀರುಪಾಲಾಗಿದ್ದ ಇಬ್ಬರು ಯುವಕರ ಶವ ಪತ್ತೆ!

- Advertisement -
- Advertisement -

ಉಡುಪಿ: ಸ್ವರ್ಣಾ ನದಿಯಲ್ಲಿ ಈಜಾಡಲು ಹೋಗಿ ಮುಳುಗಿ ಮೃತಪಟ್ಟ ಇಬ್ಬರು ಯುವಕರ ಶವ ಬುಧವಾರ ಉಗ್ಗೇಲುಬೆಟ್ಟು ಮಡಿಸಾಲು ಎಂಬಲ್ಲಿ ಪತ್ತೆಯಾಗಿದೆ.

ಮೃತ ದುರ್ದೈವಿಗಳನ್ನು ಶ್ರೇಯಸ್ (18) ಮತ್ತು ಅನಾಸ್ (16) ಎಂದು ತಿಳಿದು ಬಂದಿದೆ.ಮಂಗಳವಾರ ಮಧ್ಯಾಹ್ನ ಸ್ನೇಹಿತ ಸಂಜಯರಾಜ್‌ ಜತೆ ಹೊಳೆಯಲ್ಲಿ ಈಜಲು ಹೋಗಿದ್ದಾಗ ಶ್ರೇಯಸ್‌ ಹಾಗೂ ಆನಸ್‌ ಮುಳುಗಿದ್ದರು. ರಾತ್ರಿಯಾದರೂ ಮಕ್ಕಳು ಮನೆಗೆ ಬಾರದ ಹಿನ್ನೆಲೆಯಲ್ಲಿ ಪೋಷಕರು ಬ್ರಹ್ಮಾವರ ಠಾಣೆಗೆ ದೂರು ನೀಡಿದ್ದರು.

ಮಂಗಳವಾರ ಸಂಜೆಯೇ ಬಾಲಕರು ನೀರುಪಾಲಾಗಿರುವ ವಿಚಾರವನ್ನು ಪೊಲೀಸರು ಖಚಿತಪಡಿಸಿಕೊಂಡು ನದಿಯಲ್ಲಿ ಹುಡುಕಾಟಕ್ಕಿಳಿದಿದ್ದರು. ಮಂಗಳವಾರದ ಸಂಜೆಯಿಂದ ಸ್ವರ್ಣಾ ನದಿಯಲ್ಲಿ ಹುಡುಕಾಟ ನಡೆಸಿದ್ದು, ಬುಧವಾರ ಈಜು ಪಟು ಈಶ್ವರ್ ಅವರನ್ನು ಕರೆಸಿಕೊಂಡು ಕಾರ್ಯಚರಣೆ ನಡೆಸಿದ್ದು ಹರಿಯುವ ನದಿಯಲ್ಲಿ ಇಬ್ಬರ ಶವ ಪತ್ತೆಯಾಗಿದೆ. ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!