Tuesday, April 16, 2024
Homeಅಪರಾಧಅಕ್ರಮ ಮರಳುಗಾರಿಕೆ ಪ್ರಕರಣ: ನೇತ್ರಾವತಿ ನದಿಯಲ್ಲಿ ಕೊಚ್ಚಿ ಹೋದ ಮರಳು ಕಾರ್ಮಿಕ: ದಂಧೆಕೋರರ ನಿರ್ಲಕ್ಷದ ಕುರಿತು...

ಅಕ್ರಮ ಮರಳುಗಾರಿಕೆ ಪ್ರಕರಣ: ನೇತ್ರಾವತಿ ನದಿಯಲ್ಲಿ ಕೊಚ್ಚಿ ಹೋದ ಮರಳು ಕಾರ್ಮಿಕ: ದಂಧೆಕೋರರ ನಿರ್ಲಕ್ಷದ ಕುರಿತು ಪ್ರಕರಣ ದಾಖಲು

spot_img
- Advertisement -
- Advertisement -

ಮಂಗಳೂರು: ಮರಳು ದೋಣಿಯನ್ನು ಮೇಲಕ್ಕೆತ್ತಲು ಹೋದ ಮರಳು ಕಾರ್ಮಿಕನೊಬ್ಬ ನೇತ್ರಾವತಿ ನದಿಯಲ್ಲಿ ಕೊಚ್ಚಿ ಹೋದ ಘಟನೆ ನಡೆದಿದ್ದು, ಈ ಕುರಿತು ಅಕ್ರಮ ಮರಳು ದಂಧೆಕೋರರ ವಿರುದ್ಧ ಗಂಭೀರ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ.

ಮೂವರು ಮರಳು ಕಾರ್ಮಿಕರಾದ ಉತ್ತರ ಪ್ರದೇಶ ಮೂಲದ ರಾಜು ಸಾಹು, ಮೋಂತು ಸಾಹು ಮತ್ತು ನಾಗೇಂದ್ರ ಸಾಯನಿ ಎಂಬವರು ನಗರ ಹೊರವಲಯದ ಅರ್ಕುಳದ ಮರಳು ದಕ್ಕೆಯಲ್ಲಿ ಇಡಲಾಗಿದ್ದ ದೋಣಿಯನ್ನು ಮೇಲಕ್ಕೆತ್ತಲು ಯತ್ನಿಸಿದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

ನದಿಯಲ್ಲಿ ಪ್ರವಾಹ ಇದ್ದ ಕಾರಣ ದೋಣಿಯನ್ನು ಮೇಲಕ್ಕೆತ್ತುವ ಸಂದರ್ಭದಲ್ಲಿ ದೋಣಿ ಸಹಿತ ಮೂವರು
ಕಾರ್ಮಿಕರು ಕೊಚ್ಚಿ ಹೋಗಿದ್ದಾರೆ. ನದಿಯಲ್ಲಿ ಕೊಚ್ಚಿ ಹೋಗುತ್ತಲೇ ದೋಣಿಯು ಬಳಿಕ ಅಡ್ಯಾರ್- ಪಾವೂರಿನ ಮಧ್ಯೆ ಅಡ್ಡಲಾಗಿ ಕಟ್ಟುತ್ತಿರುವ ನಿರ್ಮಾಣ ಹಂತದ ಸೇತುವೆಯಲ್ಲಿ ಸಿಲುಕಿತ್ತು. ಈ ವೇಳೆ ಮೋಂತು ಮತ್ತು ನಾಗೇಂದ್ರ ಎಂಬ ಇಬ್ಬರು ಈಜಿ ದಡ ಸೇರಿದ್ದರೆ, ರಾಜು ಸಾಹು ಎಂಬಾತ ನದಿ ನೀರಿನ ರಭಸದಲ್ಲಿ ಕೊಚ್ಚಿ ಹೋಗಿದ್ದಾನೆ ಎನ್ನಲಾಗಿದೆ.

ಈ ಘಟನೆಯ ಕುರಿತು ದೋಣಿ ಮಾಲಕರ ವಿರುದ್ಧ ಕಂಕನಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನೇತ್ರಾವತಿ ನದಿಯಲ್ಲಿ ಈಗ ಭಾರೀ ವೇಗದಲ್ಲಿ ನೀರು ಹರಿಯುತ್ತಿದ್ದು ಅದರ ನಡುವೆ ದೋಣಿಯನ್ನು ಎಳೆದು ಕಟ್ಟಲು ಕಾರ್ಮಿಕರನ್ನು ತೊಡಗಿಸಿದ್ದ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆಸಿಫ್ ಮತ್ತು ಇಸಾಕ್ ಎಂಬ ಇಬ್ಬರು ದೋಣಿಯ ಮಾಲಕರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ವಿವರ: ದಿ ತುಂಬಿ ಹರಿಯುತ್ತಿರುವಾಗ ಮರಳು ಸಂಗ್ರಹಿಸುವುದು ಸಾಧ್ಯವಾಗದ ಕೆಲಸವಾಗಿದ್ದು, ಈ ಘಟನೆಯು ದೋಣಿಯನ್ನು ಮೇಲಕ್ಕೆತ್ತುವಾಗ ನಡೆದಿದೆಯೋ, ಪ್ರವಾಹ ಇರುವಾಗಲೂ ಅಕ್ರಮವಾಗಿ ಮರಳೆತ್ತಲು ಮುಂದಾಗಿದ್ದರೋ ಗೊತ್ತಿಲ್ಲ. ಆದರೆ ಅರ್ಕುಳ, ಕಣ್ಣೂರಿನಲ್ಲಿ ವ್ಯಾಪಕ ಅಕ್ರಮ ಮರಳುಗಾರಿಕೆ ನಡೆಯುತ್ತಾ ಬಂದಿದ್ದು, ಉತ್ತರ ಪ್ರದೇಶದ ಕಾರ್ಮಿಕರನ್ನು ಬಳಸಿಕೊಂಡು ಜಿಲ್ಲಾಡಳಿತ, ಪೊಲೀಸರ ನಿರ್ಲಕ್ಷ್ಯದ ಮಧ್ಯೆ ದಂಧೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಇದೀಗ ಕಾರ್ಮಿಕ ಕೊಚ್ಚಿ ಹೋಗಿದ್ದು ದೋಣಿ ಮೇಲಕ್ಕೆಳೆಯುವಾಗಲೇ ದುರಂತ ನಡೆದಿದೆಯೋ ಅಥವಾ ಮರಳುಗಾರಿಕೆ ನಡೆಸಲು ಅಮಾಯಕ ಕಾರ್ಮಿಕರನ್ನು ಈ ಪ್ರವಾಹದಲ್ಲಿಯೂ ನದಿಗೆ ಇಳಿಸಿದ್ದರೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸಿದ ಮೇಲೆ ಮಾಹಿತಿ ತಿಳಿಯಬೇಕಷ್ಟೆ.

- Advertisement -
spot_img

Latest News

error: Content is protected !!