Saturday, May 18, 2024
Homeಕರಾವಳಿಪತ್ರಿಕಾರಂಗವು ಸಮಾಜ ಕಟ್ಟುವುದರೊಂದಿಗೆ, ಸಮಾಜದ ಆಶಯವನ್ನು ಜಾಗೃತಿಯಲ್ಲಿರುವ ಕಾರ್ಯಮಾಡುತ್ತಿದೆ: ಶಾಸಕ ಪ್ರತಾಪಸಿಂಹ ನಾಯಕ್

ಪತ್ರಿಕಾರಂಗವು ಸಮಾಜ ಕಟ್ಟುವುದರೊಂದಿಗೆ, ಸಮಾಜದ ಆಶಯವನ್ನು ಜಾಗೃತಿಯಲ್ಲಿರುವ ಕಾರ್ಯಮಾಡುತ್ತಿದೆ: ಶಾಸಕ ಪ್ರತಾಪಸಿಂಹ ನಾಯಕ್

spot_img
- Advertisement -
- Advertisement -
ಬೆಳ್ತಂಗಡಿ: ಸಮಾಜ ಕಟ್ಟುವ ಕೆಲಸವು ಬೇರೆಯವರ ಅಭಿಪ್ರಾಯದ ಜೊತೆಗೆ ಸಮತೋಲನ ಸಾಧಿಸಿ ನಡೆಯಬೇಕೇ ಹೊರತು ನಾವು ನಡೆದದ್ದೇ ಸರಿ ಅದೇ ದಾರಿ ಎಂಬಂತಾಗಬಾರದು ಎಂದು ವಿಧಾನಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಹೇಳಿದರು.

ಅವರು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಜು. 02 ರಂದು ರೋಟರಿ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಇನ್ನೂ ಪತ್ರಿಕಾ ರಂಗವು ಶಾಸಕಾಂಗ ಕಾರ್ಯಾಂಗ ನ್ಯಾಯಾಂಗದಂತೆ ಸಮಾಜದ ನಾಲ್ಕನೇ ಸ್ತಂಭವೆಂದು ಗುರುತಿಸಲ್ಪಟ್ಟಿದ್ದು, ಪತ್ರಿಕೋದ್ಯಮವು ಸಮಾಜದ ಆಶಯವನ್ನು ಜಾಗೃತಿಯಲ್ಲಿರುವ ಕಾರ್ಯಮಾಡುತ್ತಿದೆ. ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಅಪಾಯ ಬಂದಾಗ ಅದನ್ನು ನಿರ್ಭೀತಿಯಿಂದ ಎಚ್ಚರಿಸುವ ಕಾರ್ಯವನ್ನು ಪತ್ರಿಕೆಗಳು ಮಾಡಿವೆ ಎಂದರು.

ಸಮಾಜದಲ್ಲಿ ಎಲ್ಲಾ ರೀತಿಯ ಭಾವನೆಗಳಿಗೆ, ಅಭಿಪ್ರಾಯಗಳಿಗೆ ಅವಕಾಶವಿರಬೇಕು. ಬದುಕುವ ಹಕ್ಕು ಎಲ್ಲರಿಗೂ ಇದೆ, ಜೀವ ತೆಗೆಯುವ ಮಟ್ಟಕ್ಕೆ ಯಾರ ಇಳಿಯಬಾರದು, ಚಾರಿತ್ರ ಹವನ ಆಗದಂತೆ ಎಚ್ಚರದಿಂದ ಇರಬೇಕು ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅವರು, ಸಮಾಜದ ಸಮಸ್ಯೆಗಳನ್ನು ಬಗೆಹರಿಸಲು ಶ್ರಮಪಡುವ ಪತ್ರಕರ್ತರು ಸ್ವತಹಃ ತಾವೇ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಕೇವಲ ಪತ್ರಿಕೆಯನ್ನೇ ನಂಬಿಕೊಂಡು ಬದುಕಲು ಕಷ್ಟವಾಗುತ್ತಿರುವ
ಸಂದರ್ಭದಲ್ಲಿ ಪತ್ರಕರ್ತರಿಗಾಗಿ ಸ್ವ ಉದ್ಯೋಗದ ತರಬೇತಿ ನೀಡಲು ಜಿಲ್ಲಾ ಸಂಘ ಚಿಂತನೆ ನಡೆಸುತ್ತಿದೆ ಎಂದರು.

ಪತ್ರಕರ್ತರ ಪ್ರತಿಭಾನ್ವಿತ ಮಕ್ಕಳಿಗೆ ಪುರಸ್ಕಾರ, ತಾಲೂಕು ಕೇಂದ್ರಗಳಲ್ಲಿ ಪತ್ರಿಕಾಭವನ ನಿರ್ಮಾಣಕ್ಕೆ ಸಹಕಾರ, ಪ್ಲಾಸ್ಟಿಕ್
ಬಳಕೆಯ ವಿರುದ್ಧ ಜಾಗೃತಿಯಂತಹ ಕಾರ್ಯಗಳು ಜಿಲ್ಲಾ ಸಂಘದಿಂದ ನಡೆಯಲಿವೆ ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಗಣೇಶ ಶಿರ್ಲಾಲು ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ತಾಲೂಕಿನ ಮೂವರು ಶಾಸಕರುಗಳ ಸಹಕಾರದೊಂದಿಗೆ ಚುನಾವಣೆಯ ಮೊದಲು ಸಂಘದ ಕಚೇರಿಗಾಗಿ ನಿವೇಶನ ಹಾಗೂ ಕನ್ನಡ ರಚನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

ಕಾರ್ಯ ಕ್ರಮದಲ್ಲಿ ಜಿಲ್ಲಾ ಗ್ರಾಮೀಣ ಕಾರ್ಯದರ್ಶಿ ಭುವನೇಶ್‌ ಗೇರುಕಟ್ಟೆ ಉಪಸ್ಥಿತರಿದ್ದರು. ಪತ್ರಕರ್ತ ಮನೋಹರ ಬಳಂಜ ಅವರ ಪತಿಯ ಸ್ಮರಣಾರ್ಥ ಬಡಕುಟುಂಬದ ಚಿಕಿತ್ಸಾ ವೆಚ್ಚಕ್ಕಾಗಿ ಕೊಡಲ್ಪಡುವ ಐದನೇ ವರ್ಷದ ದಿಶಿ ಸಾಂತ್ಸವ ನಿಧಿಯನ್ನು 6 ಅಶಕ್ತ ಕುಟುಂಬಗಳಿಗೆ ಅತಿಥಿಗಳು ಹಸ್ತಾಂತರಿಸಿದರು. ಸಂಘದ ಕಾರ್ಯದರ್ಶಿ ಶ್ರೀ ಇಳಂತಿಲ ಸ್ವಾಗತಿಸಿದರು. ಕೋಶಾಧಿಕಾರಿ ಪುಷ್ಪ ರಾಜ ಶೆಟ್ಟಿ ವಂದಿಸಿದರು. ಸದಸ್ಯ ಅಚುಶ್ರೀ

- Advertisement -
spot_img

Latest News

error: Content is protected !!