Friday, June 26, 2026
Homeತಾಜಾ ಸುದ್ದಿಮೈಸೂರಿನ ಹೋಟೆಲ್ ವೊಂದರಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ನರೇಶ್ ಹಾಗೂ ಪವಿತ್ರಾ ಲೋಕೇಶ್

ಮೈಸೂರಿನ ಹೋಟೆಲ್ ವೊಂದರಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ನರೇಶ್ ಹಾಗೂ ಪವಿತ್ರಾ ಲೋಕೇಶ್

- Advertisement -
- Advertisement -

ಮೈಸೂರು: ಟಾಲಿವುಡ್ ನಟ ನರೇಶ್, ನಟಿ ಪವಿತ್ರಾ ಲೋಕೇಶ್  ವಿಚಾರ ದಿನಕ್ಕೊಂದು ರೀತಿಯಲ್ಲಿ ಸದ್ದು ಮಾಡುತ್ತಲೇ ಇದೆ. ಇದೀಗ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ಮೈಸೂರಿನ ಹೋಟೆಲ್ ವೊಂದರಲ್ಲಿ ಪವಿತ್ರ ಲೋಕೇಶ್ ಹಾಗೂ ನರೇಶ್ ಪತ್ನಿ ರಮ್ಯಾ ಅವರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.ಹುಣಸೂರು ರಸ್ತೆಯ ಹೊಟೇಲ್ ವೊಂದರಲ್ಲಿ ಪವಿತ್ರ ಲೋಕೇಶ್ ಹಾಗೂ ನರೇಶ್ ತಂಗಿದ್ದರು. ಈ ಮಾಹಿತಿ ತಿಳಿದ ನರೇಶ್ ಪತ್ನಿ ರಮ್ಯಾ ರೂಮ್ ಬಳಿ ಕಾದು ಕುಳಿತಿದ್ದು, ಪವಿತ್ರ ಲೋಕೇಶ್, ನರೇಶ್ ಹೊಟೇಲ್ ನಿಂದ ಹೊರ ಬರುತ್ತಿದ್ದಂತೆಯೇ ಚಪ್ಪಲಿಯಲ್ಲಿ ಹಲ್ಲೆ ನಡೆಸಲು ಯತ್ನಿಸಿದ್ದು, ಈ ವೇಳೆ ರಮ್ಯಾ ಅವರನ್ನು ಪೊಲೀಸರು ತಡೆದಿದ್ದಾರೆ.

ಈ ವೇಳೆ ಪವಿತ್ರಾ ಲೋಕೇಶ್ ಹಾಗೂ ನರೇಶ್ ಗೆ ರಮ್ಯಾ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿದ ನರೇಶ್, ನೀನು ವಂಚಕಿ, ಮೋಸಗಾತಿ ಎಂದು ಕಿರುಚಾಡಿದ್ದಾರೆ.

- Advertisement -

Latest News

error: Content is protected !!