Thursday, June 4, 2026
Homeಕರಾವಳಿಕಾಸರಕೋಡು,ಪಡುಬಿದ್ರಿ ಕಡಲತೀರಗಳಿಗೆ ಪ್ರತಿಷ್ಠಿತ 'ಬ್ಲೂ ಫ್ಲ್ಯಾಗ್' ಪ್ರಮಾಣಪತ್ರ!

ಕಾಸರಕೋಡು,ಪಡುಬಿದ್ರಿ ಕಡಲತೀರಗಳಿಗೆ ಪ್ರತಿಷ್ಠಿತ ‘ಬ್ಲೂ ಫ್ಲ್ಯಾಗ್’ ಪ್ರಮಾಣಪತ್ರ!

- Advertisement -
- Advertisement -

ಕಾರವಾರ: ಇಲ್ಲಿನ ಹೊನ್ನಾವರ ತಾಲ್ಲೂಕಿನ ಕಾಸರಕೋಡು, ಉಡುಪಿ ಜಿಲ್ಲೆಯ ಪಡುಬಿದ್ರಿ ಕಡಲತೀರಗಳಿಗೆ ಪ್ರತಿಷ್ಠಿತ ‘ಬ್ಲೂ ಫ್ಲ್ಯಾಗ್’ ಪ್ರಮಾಣಪತ್ರ ಘೋಷಣೆಯಾಗಿದೆ.ದೇಶದ ಒಟ್ಟು ಎಂಟು ಕಡಲತೀರಗಳು ಈ ಹಿರಿಮೆ ಪಡೆದಿವೆ.
ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಮಾಹಿತಿ ನೀಡಿದ್ದು ‘ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ಧ್ವಜಾರೋಹಣದ ದಿನಾಂಕ ಶೀಘ್ರವೇ ಪ್ರಕಟವಾಗಲಿದೆ’ ಎಂದು ತಿಳಿಸಿದರು.

ಮಹಾರಾಷ್ಟ್ರದ ಕಡಲತೀರಗಳನ್ನು ಬ್ಲೂ ಫ್ಲ್ಯಾಗ್‌ ಪ್ರಮಾಣಪತ್ರ ಪಡೆಯುವ ನಿಟ್ಟಿನಲ್ಲಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿತ್ತು. ಆದರೆ, ಅಲ್ಲಿ ನೀರಿನ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗದೇ ಯೋಜನೆ ಪ್ರಕಟವಾದ ನಾಲ್ಕು ತಿಂಗಳ ಬಳಿಕ ನಮ್ಮ ರಾಜ್ಯಕ್ಕೆ ವಿಸ್ತರಿಸಿದರು. ಕಡಿಮೆ ಅವಧಿಯಲ್ಲೂ ನಾವು ಕೇಂದ್ರ ಸರ್ಕಾರದ ಸೂಚನೆಗಳ ಪ್ರಕಾರ ಕಾಸರಕೋಡು ಕಡಲತೀರವನ್ನು ಅಭಿವೃದ್ಧಿ ಪಡಿಸಿದ್ದೇವೆ’ ಎಂದು ಸಂತಸ ವ್ಯಕ್ತಪಡಿಸಿದರು.

- Advertisement -

Latest News

error: Content is protected !!