Sunday, May 12, 2024
Homeಕರಾವಳಿತಡವಾಗಿ ಬೆಳಕಿಗೆಬಂದ ಲೈಂಗಿಕ ಕಿರುಕುಳ ಕುರಿತ ಗಂಭೀರ ಆರೋಪ-ಮಂಗಳೂರು ವಿವಿ ವಿದ್ಯಾರ್ಥಿನಿಯ ಸಹಕಾರಕ್ಕೆ ನಿಲ್ಲದಿರಲು ಕಾರಣವೇನು?

ತಡವಾಗಿ ಬೆಳಕಿಗೆಬಂದ ಲೈಂಗಿಕ ಕಿರುಕುಳ ಕುರಿತ ಗಂಭೀರ ಆರೋಪ-ಮಂಗಳೂರು ವಿವಿ ವಿದ್ಯಾರ್ಥಿನಿಯ ಸಹಕಾರಕ್ಕೆ ನಿಲ್ಲದಿರಲು ಕಾರಣವೇನು?

spot_img
- Advertisement -
- Advertisement -

ಮಂಗಳೂರು: ಮಂಗಳೂರು ವಿವಿಯ ಪ್ರೊಫೆಸರ್​​​ ಒಬ್ಬರು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಗಂಭೀರ ಆರೋಪ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಮಾಹಿತಿ ಗೊತ್ತಿದ್ದರು ಕೂಡ ಮಾಜಿ ಕುಲಸಚಿವರೇ ಮುಚ್ಚಿಟ್ಟಿದ್ದಾರೆ ಎಂಬ ಗಂಭೀರ ಆರೋಪವೂ ಇದ್ದು ಈ ಬಗ್ಗೆ ರಾಜ್ಯ ಮಹಿಳಾ ಆಯೋಗವು ವರದಿ ಕೇಳಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಮೂರು ವರ್ಷಗಳ ಹಿಂದೆ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಗೆ ಅರ್ಥಶಾಸ್ತ್ರದ ಪ್ರಾಧ್ಯಾಪಕ ಪ್ರೊ. ಆರಬಿ ತರಗತಿಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಲೈಂಗಿಕ ಕಿರುಕುಳ ನೀಡಿದ್ದರು ಎನ್ನುವ ಆರೋಪವಿದ್ದು. ಈ ಬಗ್ಗೆ ವಿದ್ಯಾರ್ಥಿನಿ ಪ್ರೊ. ಆರಬಿ ವಿರುದ್ದ ವಿಶ್ವವಿದ್ಯಾನಿಲಯಕ್ಕೆ ದೂರು ನೀಡಿದ್ದಳು. ಆದರೆ ಈ ಬಗ್ಗೆ ವಿಚಾರಣೆ ನಡೆಸುವ ಬದಲು ಅಂದಿನ ಕುಲಸಚಿವ ಡಾ. ಎ.ಎಂ. ಖಾನ್ ಮುಚ್ಚಿಟ್ಟಿದ್ದಾರೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!