Sunday, June 7, 2026
Homeಕರಾವಳಿದುಷ್ಕರ್ಮಿಗಳಿಂದ ಹತ್ಯೆಗೀಡಾದ ಫಾಜಿಲ್ ಸ್ಮರಣಾರ್ಥ ಇಂದು ರಕ್ತದಾನ ಶಿಬಿರ

ದುಷ್ಕರ್ಮಿಗಳಿಂದ ಹತ್ಯೆಗೀಡಾದ ಫಾಜಿಲ್ ಸ್ಮರಣಾರ್ಥ ಇಂದು ರಕ್ತದಾನ ಶಿಬಿರ

- Advertisement -
- Advertisement -

ಮಂಗಳೂರು: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಮಹಮ್ಮದ್ ಫಾಜಿಲ್ ಸ್ಮರಣಾರ್ಥ ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ ಸಂಸ್ಥೆಯ ವತಿಯಿಂದ ಆ.7ರಂದು ದ.ಕ. ಜಿಲ್ಲೆಯ ವಿವಿಧೆಡೆ ಸಾರ್ವಜನಿಕ ರಕ್ತದಾನ ಶಿಬಿರ ಆಯೋಜಿಸಲಾಗಿದೆ.

ಸ್ವತಃ ರಕ್ತದಾನಿಯಾಗಿದ್ದ ಕೊಲೆಯಾದ ಫಾಜಿಲ್ ಅವರು ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ ಸಂಸ್ಥೆಯ ಸಕ್ರಿಯ ಸದಸ್ಯನಾಗಿದ್ದುಕೊಂಡು ತುರ್ತು ಸಂದರ್ಭ ರಕ್ತ ಪೂರೈಕೆಯಲ್ಲಿ ಮೂಂಚೂಣಿಯಲ್ಲಿದ್ದರು. ಅವರ ಸ್ಮರಣಾರ್ಥವಾಗಿ ಸಂಸ್ಥೆಯ 6ನೇ ವಾರ್ಷಿಕೋತ್ಸವದ ಪ್ರಯುಕ್ತ ಉಳ್ಳಾಲ, ಉಳಾಯಿಬೆಟ್ಟು, ಪುತ್ತೂರು, ಅಮ್ಮುಂಜೆಯಲ್ಲಿ ಆ.7ರಂದು (ಇಂದು) ಬೆಳಗ್ಗೆ 9.30ರಿಂದ ಮಧ್ಯಾಹ್ನ 1.30ರವರೆಗೆ ರಕ್ತದಾನ ಶಿಬಿರ ನಡೆಯಲಿದೆ ಎಂದು ಸಂಸ್ಥೆಯ ಸಲಹೆಗಾರ ಮುಸ್ತಫಾ ದೆಮ್ಮಲೆ ತಿಳಿಸಿದ್ದಾರೆ.

- Advertisement -

Latest News

error: Content is protected !!