Friday, June 5, 2026
Homeತಾಜಾ ಸುದ್ದಿಹತ್ತು ಬಿಜೆಪಿ ವಿಭಾಗ ಉಸ್ತುವಾರಿಗಳು ಮತ್ತು ಸಹ ಉಸ್ತುವಾರಿಗಳ ನೇಮಕ

ಹತ್ತು ಬಿಜೆಪಿ ವಿಭಾಗ ಉಸ್ತುವಾರಿಗಳು ಮತ್ತು ಸಹ ಉಸ್ತುವಾರಿಗಳ ನೇಮಕ

- Advertisement -
- Advertisement -

ಬೆಂಗಳೂರು: ಕರ್ನಾಟಕ ಬಿಜೆಪಿಯ ವಿಭಾಗ ಉಸ್ತುವಾರಿಗಳು ಮತ್ತು ಸಹ-ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ‌ ಉಸ್ತುವಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.

ಪಕ್ಷದ ಹತ್ತು ವಿಭಾಗಗಳಿಗೆ ಉಸ್ತುವಾರಿಗಳು ಮತ್ತು ಸಹ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯ ಹಿನ್ನೆಲೆಯಲ್ಲಿ ಸಂಘಟನೆಗೆ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ನೇಮಕಾತಿ ಮಾಡಲಾಗಿದೆ.

ಮಂಗಳೂರು ವಿಭಾಗದ ಉಸ್ತುವಾರಿಯಾಗಿ ಬಿ.ಬಿ. ಭಾರತೀಶ್ ಮತ್ತು ಸಹ ಉಸ್ತುವಾರಿಯಾಗಿ ಜಯಂತ್ ಕೋಟ್ಯಾನ್ ಅವರನ್ನು ನೇಮಿಸಲಾಗಿದೆ. ಮೈಸೂರು ವಿಭಾಗದ ಉಸ್ತುವಾರಿಯಾಗಿ ಸ್ವಾಮಿ ಮರುಳಾಪುರ ಮತ್ತು ಸಹ ಉಸ್ತುವಾರಿಯಾಗಿ ಇ.ಸಿ. ನಿಂಗರಾಜುಗೌಡ ನೇಮಕವಾಗಿದ್ದಾರೆ.

ಶಿವಮೊಗ್ಗ ವಿಭಾಗದ ಉಸ್ತುವಾರಿಯಾಗಿ ಆರ್.ಕೆ. ಸಿದ್ದರಾಮಣ್ಣ, ಸಹ ಉಸ್ತುವಾರಿಯಾಗಿ ಆರ್.ಡಿ. ಹೆಗಡೆ ಮತ್ತು ಧಾರವಾಡ ವಿಭಾಗದ ಉಸ್ತುವಾರಿಯಾಗಿ ಜಯತೀರ್ಥ ಕಟ್ಟಿ, ಸಹ ಉಸ್ತುವಾರಿಯಾಗಿ ಭೋಜರಾಜ ಕರೂದಿ ಅವರನ್ನು ನೇಮಿಸಲಾಗಿದೆ.

ಬೆಳಗಾವಿ ವಿಭಾಗದ ಉಸ್ತುವಾರಿಯಾಗಿ ಸಂಜಯ್ ಪಾಟೀಲ್, ಸಹ ಉಸ್ತುವಾರಿಯಾಗಿ ಬಸವರಾಜ ಯಂಕಂಚಿ ಹಾಗೂ ಕಲ್ಬುರ್ಗಿ ವಿಭಾಗದ ಉಸ್ತುವಾರಿಯಾಗಿ ಅರುಣ್ ಶಹಾಪುರ, ಸಹ ಉಸ್ತುವಾರಿಯಾಗಿ ಶರಣಪ್ಪ ತಳವಾರ ನೇಮಿಸಲ್ಪಟ್ಟಿದ್ದಾರೆ.

ಬಳ್ಳಾರಿ ವಿಭಾಗದ ಉಸ್ತುವಾರಿಯಾಗಿ ಅಮರನಾಥ ಪಾಟೀಲ್, ಸಹ ಉಸ್ತುವಾರಿಯಾಗಿ ಚನ್ನಬಸವನಗೌಡ ಪಾಟೀಲ್ ಮತ್ತು ದಾವಣಗೆರೆ ವಿಭಾಗದ ಉಸ್ತುವಾರಿಯಾಗಿ ಟಿ.ಡಿ. ಮೇಘರಾಜ್, ಸಹ ಉಸ್ತುವಾರಿಯಾಗಿ ಎ. ಮುರಳಿ ಅವರನ್ನು ನೇಮಕ ಮಾಡಲಾಗಿದೆ

ಬೆಂಗಳೂರು ಗ್ರಾಮಾಂತರ ವಿಭಾಗದ ಉಸ್ತುವಾರಿಯಾಗಿ ಬ್ಯಾಟರಂಗೇಗೌಡ, ಸಹ ಉಸ್ತುವಾರಿಯಾಗಿ ಎಂ.ಕೆ‌. ವಾಸುದೇವ ಮತ್ತು ಬೆಂಗಳೂರು ವಿಭಾಗದ ಉಸ್ತುವಾರಿಯಾಗಿ ಎಸ್.ಎನ್. ರಾಜಣ್ಣ, ಸಹ ಉಸ್ತುವಾರಿಗಳಾಗಿ ಚಂದ್ರಶೇಖರ ರಾಜು ಮತ್ತು ಕಿರಣ್ ಬಾಬು ನೇಮಕಗೊಂಡಿದ್ದಾರೆ.

- Advertisement -

Latest News

error: Content is protected !!