Wednesday, June 24, 2026
Homeತಾಜಾ ಸುದ್ದಿಬಿಜೆಪಿ ಪಕ್ಷದಿಂದ ರಂಜಾನ್ ಹಿನ್ನೆಲೆಯಲ್ಲಿ ‘ಸೌಗತ್‌-ಎ-ಮೋದಿ’ ಅಭಿಯಾನ

ಬಿಜೆಪಿ ಪಕ್ಷದಿಂದ ರಂಜಾನ್ ಹಿನ್ನೆಲೆಯಲ್ಲಿ ‘ಸೌಗತ್‌-ಎ-ಮೋದಿ’ ಅಭಿಯಾನ

- Advertisement -
- Advertisement -

ನವದೆಹಲಿ: ಬಿಜೆಪಿ ಪಕ್ಷವು ರಂಜಾನ್‌ ಹಿನ್ನೆಲೆಯಲ್ಲಿ ‘ಸೌಗತ್‌-ಎ-ಮೋದಿ’ ಅಭಿಯಾನದಡಿಯಲ್ಲಿ 32 ಲಕ್ಷ ಮುಸ್ಲಿಂ ಕುಟುಂಬಗಳಿಗೆ ಈದ್‌ ಕಿಟ್‌ ವಿತರಿಸುವ ಕಾರ್ಯವನ್ನು ಕೈಗೊಂಡಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ನೇತೃತ್ವದಲ್ಲಿ ಮಂಗಳವಾರ ದೆಹಲಿಯ ನಿಜಾಮುದ್ದೀನ್‌ನಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಈ ಕಾರ್ಯಕ್ರಮವನ್ನು ಆಚರಿಸುವ ಉದ್ದೇಶ, ಯಾವುದೇ ಕಷ್ಟವಿಲ್ಲದೆ ಬಡ ಮುಸ್ಲಿಂ ಕುಟುಂಬಗಳು ಹಬ್ಬವನ್ನು ಆಚರಿಸಬೇಕೆಂಬವುದಾಗಿದ್ದು, ಈ ಪ್ರಯತ್ನದ ಭಾಗವಾಗಿ, 32,000 ಅಲ್ಪಸಂಖ್ಯಾತ ಮೋರ್ಚಾ ಕಾರ್ಯಕರ್ತರು ದೇಶಾದ್ಯಂತ 32,000 ಮಸೀದಿಗಳ ಸಹಕಾರದೊಂದಿಗೆ ಸಹಾಯ ಮಾಡುತ್ತಿದ್ದಾರೆ.

ಇನ್ನು ‘ಸೌಗತ್-ಎ-ಮೋದಿ’ ಅಭಿಯಾನದ ಬಗ್ಗೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದಿಕಿ ಅವರು ಪಕ್ಷದ ವಿಶಾಲ ದೃಷ್ಟಿಕೋನದ ಬಗ್ಗೆ ತಿಳಿಸಿದ್ದು, ಬರೀ ರಂಜಾನ್ ಗೆ ಮಾತ್ರವಲ್ಲದೇ ಗುಡ್ ಫ್ರೈಡೇ, ಈಸ್ಟರ್, ನೌರುಜ್ ಮತ್ತು ಹೊಸ ವರ್ಷದಂತಹ ಮಹತ್ವದ ಸಂದರ್ಭಗಳಲ್ಲಿಯೂ ಪಕ್ಷದ ವತಿಯಿಂದ ಬೆಂಬಲವನ್ನು ನೀಡುವುದಾಗಿ ತಿಳಿಸಿದ್ದಾರೆ.  

- Advertisement -

Latest News

error: Content is protected !!