Thursday, April 24, 2025
Homeಅಪರಾಧರೀಲ್ಸ್ ವಿಚಾರದಲ್ಲಿ ಬಂಧನಗೊಂಡು ರಿಲೀಸಾಗಿದ್ದ ರಜತ್  ಮತ್ತು ವಿನಯ್‌ ಮತ್ತೆ ಬಂಧನ

ರೀಲ್ಸ್ ವಿಚಾರದಲ್ಲಿ ಬಂಧನಗೊಂಡು ರಿಲೀಸಾಗಿದ್ದ ರಜತ್  ಮತ್ತು ವಿನಯ್‌ ಮತ್ತೆ ಬಂಧನ

spot_img
- Advertisement -
- Advertisement -

ಬೆಂಗಳೂರು: ‘ಬಿಗ್ ಬಾಸ್’ ಖ್ಯಾತಿಯ ರಜತ್  ಮತ್ತು ವಿನಯ್‌ ಈಗಾಗಲೇ ಲಾಂಗ್ ಹಿಡಿದು ರೀಲ್ಸ್ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿಸಲ್ಪಟ್ಟಿದ್ದು, ನಂತರದಲ್ಲಿ ಅವರನ್ನು ಮಧ್ಯಾರಾತ್ರಿ ಬಿಡುಗಡೆ ಮಾಡಲಾಗಿತ್ತು. 

ಇದೀಗ ಮತ್ತೆ ವಿಚಾರಣೆಗೆ ಪೊಲೀಸ್ ಠಾಣೆಗೆ ಬಂದ ವೇಳೆ ರಜತ್‌ ಮತ್ತು ವಿನಯ್‌ರನ್ನು ಬಂಧಿಸಿದ್ದಾರೆ.

ಠಾಣೆಗೆ ಬರುವ ಮುಂಚೆಯೇ ರಜತ್‌, ‘ನಮಸ್ಕಾರ, ನಾನು ಮತ್ತು ವಿನಯ್ ರೀಲ್ಸ್ ಮಾಡಿದ್ವಿ. ನಟರಾಗಿ ಆ ರೀಲ್ಸ್ ಮಾಡಿದ್ವಿ ಹೊರತು ಅದರಿಂದ ಜನ ಕೆಟ್ಟದ್ದು ಕಲಿಯಲಿ ಎಂಬ ಉದ್ದೇಶದಿಂದ ಮಾಡಿಲ್ಲ. ನಾವು ನಿನ್ನೆ ಠಾಣೆಯಲ್ಲಿದ್ದ ಕಾರಣ ಟಿವಿ ಸೆಟ್ ಅವರಿಗೆ ಹೇಳಿ ಪ್ರಾಪರ್ಟಿ ತರಿಸಿದ್ವಿ. ಯಾವುದು ಕಳುಹಿಸಿ ಕೊಟ್ರು, ಏನು ಕಳುಹಿಸಿ ಕೊಟ್ರು ಅನ್ನೋದು ನಮಗೂ ಗೊತ್ತಿಲ್ಲ. ಅಷ್ಟು ನೀಟಾಗಿ ನಾವು ಅದನ್ನು ನೋಡಿರಲಿಲ್ಲ. ಅದರಲ್ಲಿ ಏನೋ ತಪ್ಪಾಗಿದೆ ಅಂತ ಬಂತು ಎಂದು ರಜತ್ ಹೇಳಿದ್ದಾರೆ. ಇನ್ನೂ ಪೊಲೀಸರ ದಿಕ್ಕು ತಪ್ಪಿಸುವ ಕೆಲಸ ನಾವು ಮಾಡಿಲ್ಲ. ಈ ರೀಲ್ಸ್ ಅನ್ನು ಬೇಕಂತ ಮಾಡಿಲ್ಲ,’ ಎಂದು ವಿಡಿಯೋ ಮೂಲಕ ರಜತ್ ಸ್ಪಷ್ಟನೆ ನೀಡಿದ್ದಾರೆ.

- Advertisement -
spot_img

Latest News

error: Content is protected !!