Thursday, June 4, 2026
Homeಕರಾವಳಿಬಂಟ್ವಾಳ ನಗರ ಠಾಣೆಯ ಪೊಲೀಸರ ಭರ್ಜರಿ ಕಾರ್ಯಾಚರಣೆ: ಬೈಕ್ ಕಳ್ಳರು ಅಂದರ್

ಬಂಟ್ವಾಳ ನಗರ ಠಾಣೆಯ ಪೊಲೀಸರ ಭರ್ಜರಿ ಕಾರ್ಯಾಚರಣೆ: ಬೈಕ್ ಕಳ್ಳರು ಅಂದರ್

- Advertisement -
- Advertisement -

ಬಂಟ್ವಾಳ: ದಿನಾಂಕ 27.04.2022 ರಂದು ರಾತ್ರಿ   ಕಸಬಾ ಗ್ರಾಮದ ಮಣಿಹಳ್ಳ ನಿವಾಸಿ ಮುಖೇಶ್ ಎಂಬವರು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಸುಮಾರು 1 ಲಕ್ಷ ಮೌಲ್ಯದ  ಬೈಕ್ ನ್ನು ಕಳ್ಳತನ ಮಾಡಿಲಾಗಿತ್ತು. ಅಲ್ಲದೇ 23.04.2022 ರಂದು ಅನೂಪ್ ಎಂಬವರು ಮಧ್ಯರಾತ್ರಿ ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ರೈಲ್ವೇ ಸ್ಟೇಷನ್ ಬಳಿ ಬೈಕ್ ನಿಲ್ಲಿಸಿದ್ದರು, ಅದನ್ನು ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಮಂಗಳೂರು ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎರಡೂ ಪ್ರಕರಣದ ಜಾಡು ಹಿಡಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಳ್ತಂಗಡಿ ನಿವಾಸಿ ಅಬೂಬಕ್ಕರ್ ಸಿದ್ದಿಕ್, ಬಂಟ್ವಾಳದ ನರಿಕೊಂಬು ನಿವಾಸಿ ಅಕ್ಬರ್,  ಬೆಳ್ತಂಗಡಿ ಮಾಲಾಡಿ ನಿವಾಸಿ ಮಹಮ್ಮದ್ ಸಮೀರ್ ಬಂಧಿತ ಆರೋಪಿಗಳು.

ಬಂಧಿತರಿಂದ ಕಳ್ಳತನ ಮಾಡಲಾಗಿದ್ದ ಎರಡು ಬೈಕ್ ಹಾಗೂ ಕಳ್ಳತನಕ್ಕೆ ಬಳಸುತ್ತಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಸದ್ರಿ ಪತ್ತೆ ಕಾರ್ಯದಲ್ಲಿ ಮಾನ್ಯ ಪೊಲೀಸ್ ಅಧೀಕ್ಷಕರು ದ.ಕ. ಜಿಲ್ಲೆ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ದ.ಕ. ಜಿಲ್ಲೆ ಮಂಗಳೂರು ರವರ ಮಾರ್ಗದರ್ಶನದಂತೆ, ಮಾನ್ಯ ಸಹಾಯಕ ಪೊಲೀಸ್ ಅಧೀಕ್ಷಕರು ಶಿವಾಂಸು ರಜಪೂತ್ ಮತ್ತು ಪೊಲೀಸ್ ನಿರೀಕ್ಷಕರಾದ ವಿವೇಕಾನಂದ ರವರ ನಿರ್ದೇಶನದಂತೆ ಪಿಎಸ್ಐಗಳಾದ  ಅವಿನಾಶ್ (ಕಾ&ಸು) ಮತ್ತು   ಕಲೈಮಾರ್ (ತನಿಖೆ-1) ರವರ ನೇತೃತ್ವದಲ್ಲಿ ವಿಶೇಷ ತಂಡದ ಸಿಬ್ಬಂದಿಯಾದ  ನಾರಾಯಣ,    ಇರ್ಷಾದ್ ಪಿ ,   ಗಣೇಶ್,    ಮನೋಹರ, ಪ್ರವೀಣ್,  ಮೋಹನ, ನಾಗರಾಜ್, ಹಾಗೂ ಗಣಕಯಂತ್ರ ವಿಭಾಗದ  ಸಿಬ್ಬಂದಿಯವರಾದ  ಸಂಪತ್  ಮತ್ತು ದಿವಾಕರ ರವರು ಭಾಗವಹಿಸಿ ಪತ್ತೆ ಮಾಡಿರುತ್ತಾರೆ.

- Advertisement -

Latest News

error: Content is protected !!