Saturday, June 13, 2026
Homeಕರಾವಳಿಉಡುಪಿಕರಾವಳಿಯಲ್ಲಿ ಕೀ ಸಮೇತ ಬೈಕ್ ಕದಿಯುತ್ತಿದ್ದ ಕಳ್ಳ ಅಂದರ್: ಬಂಧಿತ ಆರೋಪಿ ಬಿಎಸ್ಸಿ ಪದವೀಧರ

ಕರಾವಳಿಯಲ್ಲಿ ಕೀ ಸಮೇತ ಬೈಕ್ ಕದಿಯುತ್ತಿದ್ದ ಕಳ್ಳ ಅಂದರ್: ಬಂಧಿತ ಆರೋಪಿ ಬಿಎಸ್ಸಿ ಪದವೀಧರ

- Advertisement -
- Advertisement -

ಉಡುಪಿ: ಕೀ ಸಮೇತ ಪಾರ್ಕ್ ಮಾಡಿದ್ದ ಬೈಕ್ ಗಳನ್ನು ಕಳ್ಳತನ ಮಾಡುತ್ತಿದ್ದ ಎಜುಕೇಟೆಡ್ ಕಳ್ಳನನ್ನು ಹಿಡಿಯುವಲ್ಲಿ  ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತನನ್ನು ಬೆಳಗಾಂನ ಹುಕ್ಕೇರಿ ತಾಲೂಕಿನ ಶಿರಾಹಟ್ಟಿಯ ಸಾಗರ್ ಸುದೀರ್ ಹರ್ಗಾಪುರೆ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿ ಬಿಎಸ್ಸಿ ಪದವೀಧರ. ಆರೋಪಿಯನ್ನು ಎಪ್ರಿಲ್ 14 ರಂದು ಉಡುಪಿಯ ಐರೋಡಿಕರ್ ಜಂಕ್ಷನ್ ಬಳಿ ಇರುವ ತಲ್ಲೂರು ವೈನ್ಸ್ ಎದುರು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

 ಬಂಧಿತನಿಂದ 2 ಬೈಕ್ ವಶಕ್ಕೆ ಪಡೆದುಕೊಂಡಿದ್ದು, 1 ಬೈಕ್‌ನ್ನು ಆರೋಪಿತನು ಮೈಸೂರಿನ ಲಷ್ಕರ್ ಠಾಣಾ ಸರಹದ್ದಿನಲ್ಲಿ ಕಳವು ಮಾಡಿದ್ದೆಂದು ಹೇಳಿದ್ದು ಮೋಟಾರು ಸೈಕಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿ ಸಾಗರ್ ಸುಧೀರ್ ಬಿ.ಎಸ್.ಸಿ ಪದವಿಯಲ್ಲಿ ಅನುತ್ತೀರ್ಣನಾಗಿದ್ದು ಮಂಗಳೂರು ಮತ್ತು ಉಡುಪಿಯಲ್ಲಿ ಕೆಲವು ಖಾಸಗಿ ಮಾಲ್‌ಗಳಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿದ್ದ. ಉಡುಪಿಯಲ್ಲಿರುವ ಚಾರ್ವಿ ಪಿ.ಜಿಯಲ್ಲಿ ವಾಸವಾಗಿದ್ದು, ಕೀ ಸಮೇತವಾಗಿ ಬಿಟ್ಟು ಹೋಗುವ ಬೈಕ್‌ನ್ನು ಕಳ್ಳತನ ಮಾಡುವ ಪ್ರವೃತ್ತಿಯವನಾಗಿದ್ದ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!