Friday, June 26, 2026
Homeಕರಾವಳಿಅಲೆಕ್ಕಾಡಿ: ಬೈಕ್ ಮತ್ತು ಓಮ್ನಿ ಡಿಕ್ಕಿ; ಬೈಕ್ ಸವಾರನಿಗೆ ಗಾಯ

ಅಲೆಕ್ಕಾಡಿ: ಬೈಕ್ ಮತ್ತು ಓಮ್ನಿ ಡಿಕ್ಕಿ; ಬೈಕ್ ಸವಾರನಿಗೆ ಗಾಯ

- Advertisement -
- Advertisement -

ಅಲೆಕ್ಕಾಡಿ: ಮುರುಳ್ಯ ಗ್ರಾಮದ ಅಲೆಕ್ಕಾಡಿಯ ದಾರಿಯಾಗಿ ಸಾಗುತ್ತಿದ್ದ ಬೈಕ್ ಹಾಗೂ ಓಮ್ನಿ ಕಾರಿನ ನಡುವೆ ಅಪಘಾತ ಸಂಭವಿದ್ದು, ಬೈಕ್ ಚಾಲಕ ಗಾಯಗೊಂಡ ಘಟನೆ ನಡೆದಿದೆ.


ಗಾಯಗೊಂಡ ಬೈಕ್ ಸವಾರನನ್ನು ಸೀತಾರಾಮ ಗೌಡ ಎಂದು ಗುರುತಿಸಲಾಗಿದೆ. ಸೀತಾರಾಮ ಗೌಡ ಅವರು ಮೋಟಾರು ಕುದ್ಮಾರು ಕಡೆಯಿಂದ ಎಡಮಂಗಲ ಕಡೆಗೆ ಮಂಜೇಶ್ವರ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಹೋಗುತ್ತಿರುವಾಗ ಮುರುಳ್ಯ ಗ್ರಾಮದ ಅಲೆಕ್ಕಾಡಿ ಎಂಬಲ್ಲಿ ನಿಂತಿಕಲ್ಲು ಕಡೆಯಿಂದ ಕಾಣಿಯೂರು ಕಡೆಗೆ ಬರುತ್ತಿದ್ದ ಓಮ್ನಿ ಕಾರು ಡಿಕ್ಕಿಯಾಗಿದೆ.


ಈ ಪರಿಣಾಮ ಬೈಕ್ ಸಹಿತ ರಸ್ತೆಗೆ ಬಿದ್ದು ಬೈಕ್ ಸವಾರನಿಗೆ ಗಾಯ ವಾಗಿದೆ. ಸಹ ಸವಾರನಿಗೆ ಅಲ್ಪ ಸ್ವಲ್ಪ ಗಾಯವಾಗಿದೆ. ಗಾಯಾಳು ಸೀತಾರಾಮ ಗೌಡ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

- Advertisement -

Latest News

error: Content is protected !!