Saturday, June 6, 2026
Homeಕರಾವಳಿಸುಳ್ಯ:ಮದರಸಾದಿಂದ ಮನೆಗೆ ಹಿಂತಿರುಗಿದ್ದ ಬಾಲಕಿಗೆ ಬೈಕ್ ಡಿಕ್ಕಿ, ಬಾಲಕಿ ಸಾವು

ಸುಳ್ಯ:ಮದರಸಾದಿಂದ ಮನೆಗೆ ಹಿಂತಿರುಗಿದ್ದ ಬಾಲಕಿಗೆ ಬೈಕ್ ಡಿಕ್ಕಿ, ಬಾಲಕಿ ಸಾವು

- Advertisement -
- Advertisement -

ಸುಳ್ಯ: ಮದ್ರಾಸದಿಂದ ಮನೆಗೆ ಮರಳುತ್ತಿದ್ದ ಬಾಲಕಿಯೊಬ್ಬಳಿಗೆ ಬೈಕೊಂದು ಡಿಕ್ಕಿ ಹೊಡೆದ ಪರಿಣಾಮ ಆಕೆ ಮೃತಪಟ್ಟ ಘಟನೆ ಸುಳ್ಯ ಸಮೀಪದ ಅರಂಬೂರು ಬಳಿ ನಡೆದಿದೆ.

ಇಲ್ಲಿ‌ನ ಪಾಲಡ್ಕದ ರಶೀದ್ ಎಂಬವರ ಪುತ್ರಿ ರಿಫಾ (7 ವರ್ಷ) ಇಂದು ಬೆಳಿಗ್ಗೆ 8.45ರ ಸುಮಾರಿಗೆ ಅರಂಬೂರು ಮದ್ರಸಾದಿಂದ ಹಿಂತಿರುಗಿ ಪಾಲಡ್ಕದಲ್ಲಿ ಮನೆ ಕಡೆಗೆ ಹೋಗಲು ರಸ್ತೆ ದಾಟುತ್ತಿದ್ದಾಗ ಅರಂತೋಡು ಕಡೆಯಿಂದ ಸುಳ್ಯ ಕಡೆಗೆ ಬರುತ್ತದ್ದ ಬೈಕೊಂಡು ಡಿಕ್ಕಿ ಹೊಡೆಯಿತು. ಪರಿಣಾಮ ಬಾಲಕಿ ಗಾಯಗೊಂಡಿದ್ದಾಳೆ,

ತಕ್ಷಣ ಬಾಲಕಿಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಷ್ಟರಲ್ಲಿ ಕಂದಮ್ಮ ಸಾವನ್ನಪ್ಪಿದೆ. ಸುಳ್ಯ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!