
ಬೆಳ್ತಂಗಡಿ : ಬಂದಾರು ಗ್ರಾಮ ಪೆರ್ಲ -ಬೈಪಾಡಿ ಶ್ರೀ ಸಿದ್ದಿವಿನಾಯಕ ಯುವಕ ಮಂಡಲ ಇದರ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ 24 ನೇ ವರ್ಷದ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟದ ಉದ್ಘಾಟನೆಯನ್ನು ಬಾಲಂಪಾಡಿ ತರವಾಡು ಮನೆಯ ಉಮೇಶ್ ಗೌಡರವರು ದೀಪ ಪ್ರಜ್ವಲನೆಗೈಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ಶ್ರೀ ಸಿದ್ದಿವಿನಾಯಕ ಯುವಕ ಮಂಡಲಾದ ಅಧ್ಯಕ್ಷರಾದ ರಾಧಾಕೃಷ್ಣ ಪಾರೊಟ್ಟು ಸಭಾಧ್ಯಕ್ಷತೆ ವಹಿಸಿದ್ದರು. ಪೆರ್ಲ -ಬೈಪಾಡಿ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಬಾಲಕೃಷ್ಣ. ಕೆ , ಸಹ ಶಿಕ್ಷಕರಾದ ಮಹೇಶ್, ಶ್ರೀ ಸಿದ್ದಿವಿನಾಯಕ ಯುವಕ ಮಂಡಲ ಕಾರ್ಯದರ್ಶಿ ಸಂಪತ್ ಕರ್ಲೋಡಿ, ಯುವಕ ಮಂಡಲ ಮಾಜಿ ಅಧ್ಯಕ್ಷರಾದ ದಿವಾಕರ ಗೌಡ ಬಾಲಂಪಾಡಿ, ಮಾಜಿ ಅಧ್ಯಕ್ಷರಾದ ಲೋಹಿತ್ ಗೌಡ ಸೋಣಕುಮೇರು, ಕಣಿಯೂರು ಮಹಾಶಕ್ತಿ ಕೇಂದ್ರ ಯುವಮೋರ್ಚಾ ಸಂಚಾಲಕರಾದ ಲೋಕ್ಷಾತ್ ಗೌಡ ಅನಿಲ, ಹಾಗೂ ಯುವಕ ಮಂಡಲ ಪದಾಧಿಕಾರಿಗಳು, ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.ವಿಠಲ್ ಒಳಗುಡ್ಡೆ ನಿರೂಪಿಸಿ, ಸತೀಶ್ ಸ್ವಾಗತಿಸಿ, ಧನ್ಯವಾದವಿತ್ತರು.ಪುರುಷರಿಗೆ ವಾಲಿಬಾಲ್,ಹಗ್ಗಜಗ್ಗಾಟ,ಗೋಣಿ ಚೀಲ ಓಟ, ಮಹಿಳೆಯರಿಗೆ ತ್ರೋಬಾಲ್, ಹಗ್ಗಜಗ್ಗಾಟ, ಸಂಗೀತ ಕುರ್ಚಿ, 50 ವರ್ಷ ಮೇಲ್ಪಟ್ಟವರಿಗೆ ತೆಂಗಿನಕಾಯಿ ಎಸೆಯುವ ಸ್ಪರ್ಧೆ ನೆರವೇರಿತು, ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಭಾಗವಹಿಸಿದ್ದರು.


