Monday, October 12, 2026
Homeಕರಾವಳಿಉಪ್ಪಿನಂಗಡಿ: ಕೂಟೇಲಿನಲ್ಲಿ ಅಪಘಾತದಲ್ಲಿ ವ್ಯಕ್ತಿಗೆ ಗಂಭೀರ ಗಾಯ

ಉಪ್ಪಿನಂಗಡಿ: ಕೂಟೇಲಿನಲ್ಲಿ ಅಪಘಾತದಲ್ಲಿ ವ್ಯಕ್ತಿಗೆ ಗಂಭೀರ ಗಾಯ

- Advertisement -
- Advertisement -

ಉಪ್ಪಿನಂಗಡಿ: ಓಮ್ನಿ ಕಾರು ಹಾಗೂ ಬೈಕ್ ನಡುವೆ ಢಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ ಬಳಿಯ ಕೂಟೇಲು ಎಂಬಲ್ಲಿ ಇಂದು ನಡೆದಿದೆ. ಕೆಮ್ಮಾರ ನಿವಾಸಿ ಮೋನಪ್ಪ ಗೌಡ (60) ಗಂಭೀರ ಗಾಯಗೊಂಡ ಬೈಕ್ ಸವಾರ.

ಉಪ್ಪಿನಂಗಡಿಯಿಂದ ಇವರು ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಕೂಟೇಲು ಸಮೀಪ ಎದುರಿನಿಂದ ಬಂದ ಓಮ್ನಿ ಕಾರು ಬೈಕ್ ಗೆ ಢಿಕ್ಕಿಯಾಗಿದೆ ಎನ್ನಲಾಗಿದೆ.ಅಪಘಾತದಲ್ಲಿ ಮೋನಪ್ಪ ಗಂಭೀರ ಗಾಯಗೊಂಡಿದ್ದಾರೆ. ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!