Wednesday, May 15, 2024
Homeತಾಜಾ ಸುದ್ದಿಯಾವ ರಾಜ್ಯದಲ್ಲಿ ಅತಿ ಹೆಚ್ಚು ಮದ್ಯ ಸೇವನೆಯಾಗುತ್ತೆ? ಸಮೀಕ್ಷೆಯಲ್ಲಿದೆ ಮಹಿಳೆಯರ ಕುಡಿತದ ಬಗ್ಗೆ ಕುತೂಹಲದ ಅಂಶ..

ಯಾವ ರಾಜ್ಯದಲ್ಲಿ ಅತಿ ಹೆಚ್ಚು ಮದ್ಯ ಸೇವನೆಯಾಗುತ್ತೆ? ಸಮೀಕ್ಷೆಯಲ್ಲಿದೆ ಮಹಿಳೆಯರ ಕುಡಿತದ ಬಗ್ಗೆ ಕುತೂಹಲದ ಅಂಶ..

spot_img
- Advertisement -
- Advertisement -

ನವದೆಹಲಿ: ಪಶ್ಚಿಮ ರಾಜ್ಯಗಳಾದ ಗೋವಾ ಮತ್ತು ಮಹಾರಾಷ್ಟ್ರದಲ್ಲಿನ ಜನರು ಹೆಚ್ಚು ಮದ್ಯ ಕುಡಿಯುತ್ತಾರೆ ಎಂಬುದು ಜನಪ್ರಿಯ ಗ್ರಹಿಕೆಯಾಗಿತ್ತು. ಆದರೆ ಈಗ ಬಿಡುಗಡೆಗೊಂಡಿರುವ ನೂತನ ಸಮೀಕ್ಷೆ ಅದಕ್ಕೆ ತದ್ವಿರುದ್ದವಾದ ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ.

ಬಿಹಾರದಲ್ಲಿ ನಿತೀಶ್​ ಕುಮಾರ್ ನೇತೃತ್ವದ ಸರ್ಕಾರ 2016ರಲ್ಲೇ ಮದ್ಯಪಾನ ನಿಷೇಧ ಕಾನೂನನ್ನ ಜಾರಿಗೆ ತಂದಿದೆ. ಆದರೆ ವಿಪರ್ಯಾಸ ಏನು ಅಂದರೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ನೀಡಿದ ವರದಿ ಪ್ರಕಾರ ಮದ್ಯಪಾನ ನಿಷೇಧ ಹೊಂದಿರುವ ಬಿಹಾರದಲ್ಲಿ ಮಹಾರಾಷ್ಟ್ರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮದ್ಯಪಾನವನ್ನ ಬಳಕೆ ಮಾಡಲಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ.‌

ಸಿಕ್ಕಿಂನಲ್ಲಿ ಅತೀ ಹೆಚ್ಚು ಮಹಿಳೆಯರು (ಶೇ.16.2ರಷ್ಟು) ಹಾಗೂ ಅಸ್ಸಾಂನಲ್ಲಿ ಶೇ.7.3ರಷ್ಟು ಮದ್ಯ ಸೇವಿಸುತ್ತಾರೆ ಎಂದು ಸಮೀಕ್ಷೆ ಹೇಳಿದೆ. ಸಮೀಕ್ಷೆಯ ಪ್ರಕಾರ ಗುಜರಾತ್ ಮತ್ತು ಜಮ್ಮು-ಕಾಶ್ಮೀರದಲ್ಲಿ ಪುರುಷರು ಅತೀ ಕಡಿಮೆ ಪ್ರಮಾಣದ ಮದ್ಯ ಸೇವಿಸುತ್ತಿದ್ದು, ದಕ್ಷಿಣ ಭಾರತದ ತೆಲಂಗಾಣ ರಾಜ್ಯದಲ್ಲಿ ಅತೀ ಹೆಚ್ಚು ಮದ್ಯ ಮಾರಾಟವಾಗುತ್ತಿರುವ ಆಘಾತಕಾರಿ ಅಂಶ ತಿಳಿದುಬಂದಿದೆ.

ಎಲ್ಲ ರಾಜ್ಯಗಳಲ್ಲಿ ಮದ್ಯಪಾನಕ್ಕೆ ಹೋಲಿಕೆ ಮಾಡಿದ್ರೆ ತಂಬಾಕು ಸೇವನೆ ಮಾಡುವವರ ಸಂಖ್ಯೆಯೇ ಜಾಸ್ತಿ ಇದೆ ಅನ್ನೋದನ್ನ ಈ ವರದಿ ಬಹಿರಂಗ ಪಡಿಸಿದೆ. ತಂಬಾಕು ಸೇವನೆಯಲ್ಲಿ ಮಿಜೋರಾಂ ಮೊದಲ ಸ್ಥಾನದಲ್ಲಿದ್ದು ಇಲ್ಲಿ 65 ಪ್ರತಿಶತಕ್ಕೂ ಹೆಚ್ಚು ಮಹಿಳೆಯರು ಹಾಗೂ 75 ಪ್ರತಿಶತಕ್ಕೂ ಹೆಚ್ಚು ಪುರುಷರು ತಂಬಾಕು ಸೇವನೆ ಮಾಡುತ್ತಾರಂತೆ. ಕೇರಳ ಹಾಗೂ ಗೋವಾ ತಂಬಾಕು ಸೇವನೆಯಲ್ಲಿ ಕ್ರಮವಾಗಿ ನಂತರದ ಸ್ಥಾನಗಳನ್ನ ಪಡೆದಿವೆ.

- Advertisement -
spot_img

Latest News

error: Content is protected !!