Wednesday, June 24, 2026
Homeಅಪರಾಧಬಿಗ್ ಬಾಸ್ ಸ್ಪರ್ಧಿ ಲಾಯರ್ ಜಗದೀಶ್ ಗೆ ಕೊಲೆ ಬೆದರಿಕೆ; ದರ್ಶನ್, ಅಭಿಮಾನಿ ಮೇಲೆ ದೂರು...

ಬಿಗ್ ಬಾಸ್ ಸ್ಪರ್ಧಿ ಲಾಯರ್ ಜಗದೀಶ್ ಗೆ ಕೊಲೆ ಬೆದರಿಕೆ; ದರ್ಶನ್, ಅಭಿಮಾನಿ ಮೇಲೆ ದೂರು ದಾಖಲಿಸಿದ ಜಗದೀಶ್

- Advertisement -
- Advertisement -

ಬೆಂಗಳೂರು: ಬಿಗ್ ಬಾಸ್ ಕನ್ನಡ-11 ಕಾರ್ಯಕ್ರಮದ ಮೂಲಕ ಮನೆಮನದ ಮಾತಾಗಿರುವ ಲಾಯರ್ ಜಗದೀಶ್ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂದ ಆರೋಪಿ ದರ್ಶನ್ ಬಗ್ಗೆ ಅನೇಕ ಬಾರಿ ಮಾತನಾಡಿದ್ದಾರೆ.

ಹಲವು ಬಾರಿ ಜಗದೀಶ್ ‌ನಾನಾ ಕಡೆ ಮಾಧ್ಯಮಗಳಿಗೆ, ‘ದರ್ಶನ್ ಅವರ ಅಭಿಮಾನಿಗಳಿಗೆ ನಾವು ಹೆದರಲ್ಲ ನಮ್ಮ ತಂಡಕ್ಕೆ ಕೇಸ್ ಕೊಡಿ ಅವರನ್ನು ಬಿಡಿಸಿಕೊಂಡು ‌ಬರುತ್ತೇವೆ,’ ಎಂದು ಪ್ರತಿಕ್ರಿಯೆ ನೀಡಿದ್ದರು.

ಇನ್ನು ದರ್ಶನ್ ಇದೀಗ ವೈದ್ಯಕೀಯ ಜಾಮೀನಿನ ಮೇಲೆ ಹೊರಗೆ ಬಂದಿದ್ದು, ದರ್ಶನ್ ಅಭಿಮಾನಿಗಳು ತಮಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಜಗದೀಶ್ ದರ್ಶನ್ ಹಾಗೂ ಅವರ ಅಭಿಮಾನಿಯೊಬ್ಬರ ಮೇಲೆ ದೂರು ದಾಖಲಿಸಿದ್ದಾರೆ.

ಘಟನೆಯ ವಿವರ: ರಿಷಿ ಎನ್ನುವವನು ದರ್ಶನ್ ಬಗ್ಗೆ ಮರ್ಯಾದೆ ‌ಕೊಟ್ಟು ಮಾತನಾಡು ತುಂಬಾ ಜಾಸ್ತಿ ಆಯಿತು ಎಂದೇಳಿ ಕೊಲೆ ಬೆದರಿಕೆ ಹಾಕಿದ್ದಾನೆ. ನಿನ್ನೆಯಿಂದ ನಿರಂತರವಾಗಿ 10 ಸಾವಿರ ಕಾಲ್ ಬಂದಿದೆ. ನಾವೇನು ಕೇರ್ ಮಾಡೋಕೆ ಹೋಗಿಲ್ಲ. ದರ್ಶನ್ ಹಾಗೂ ರಿಷಿ ಮೇಲೆ ದೂರು ದಾಖಲಿಸುತ್ತಿದ್ದೇನೆ. ಕಾಲ್ ಮಾಡಿ ನಮ್ಮನ್ನು ಬೆದರಿಸುತ್ತಿದ್ದೀರಾ ಅಂದ್ರೆ ನಿಮ್ಮಂಥ ದಡ್ಡರು ಯಾರೂ ಇಲ್ಲ. ದರ್ಶನ್ ಬಗ್ಗೆ ಈ ರೀತಿ ಮಾತನಾಡುತ್ತೀಯ, ಕನ್ನಡ ಫಿಲ್ಮ್ ಇಂಡಸ್ಟ್ರಿಗೆ ಹೇಗೆ  ಕಾಲಿಡುತ್ತೀಯ. ರಚಿತಾ ರಾಮ್ ಬಗ್ಗೆ ಆ ರೀತಿ ‌ಮಾತನಾಡ್ತೀಯ ಅಂಥ ಪ್ರತಿಯೊಬ್ಬರು ಹೇಳ್ತಾರೆ. ಕನ್ನಡ ಇಂಡಸ್ಟ್ರಿ ಬಾಸ್ ದರ್ಶನ್ ಅಂತೆ. ಅವನು ಮೆಡಿಕಲ್ ಬೇಲ್ ಮೇಲೆ ಆಚೆ ಇದ್ದಾನೆ. ಇದನ್ನು ಅವನೇ ಮಾಡಿಸುತ್ತಿದ್ದಾನಾ ಅಥವಾ ಅವನ ಹೆಸರಿನಲ್ಲಿ ಬೇರೆ ಅವರು ಮಾಡುತ್ತಿದ್ದಾರೋ. ಒಟ್ಟಿನಲ್ಲಿ ನಾನು ಬಿಗ್ಬಾಸ್ ಅಲ್ಲಿ ಹೆಸರು ಮಾಡಿರುವುದು ಕನ್ನಡ ಫಿಲ್ಮ್ ಇಂಡಸ್ಟ್ರಿಗೆ ಕಾಲಿಡುತ್ತಿರುವುದು ದರ್ಶನ್ ಮತ್ತೆ ಅವನ ಪಟಾಲಂಗೆ ಇಷ್ಟ ಇಲ್ಲ ಅನ್ನಿಸುತ್ತದೆ ಎಂದಿದ್ದಾರೆ.

ಈ ಬಗ್ಗೆ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

Latest News

error: Content is protected !!