Friday, June 26, 2026
Homeಮನರಂಜನೆಬಿಗ್ ಬಾಸ್ ಸೀಸನ್ 9 ನಡೆಯುತ್ತಿದೆ ಭರ್ಜರಿ ಸಿದ್ಧತೆ; ಆಗಸ್ಟ್  ನಲ್ಲಿ ಆರಂಭವಾಗಲಿದೆ ಬಿಗ್ ಶೋ

ಬಿಗ್ ಬಾಸ್ ಸೀಸನ್ 9 ನಡೆಯುತ್ತಿದೆ ಭರ್ಜರಿ ಸಿದ್ಧತೆ; ಆಗಸ್ಟ್  ನಲ್ಲಿ ಆರಂಭವಾಗಲಿದೆ ಬಿಗ್ ಶೋ

- Advertisement -
- Advertisement -

ಬೆಂಗಳೂರು: ಬಿಗ್ ಬಾಸ್  ಸೀಸನ್ 9 ಆಗಸ್ಟ್ ಮೊದಲ ಅಥವಾ ಎರಡನೇ ವಾರದಲ್ಲಿ ಶುರುವಾಗುವುದು ಬಹುತೇಕ ಖಚಿತವಾಗಿದೆ‌‌ . ಇದೀಗ ಬಿಗ್ ಬಾಸ್ ಮನೆಯಲ್ಲಿ ಭರದಿಂದ ಕೆಲಸಗಳು ನಡೆಯುತ್ತಿರುವ ಫೋಟೋ ಒಂದನ್ನು ಕಲರ್ಸ್  ಕನ್ನಡ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇನ್ನು ಈ ಬಾರಿ ಒಂದಲ್ಲ ಎರಡು ಬಿಗ್ ಬಾಸ್ ಶೋ ನಡೆಯಲಿದೆ. ಆಗಸ್ಟ್‌ನಲ್ಲಿ ಶುರುವಾದ ಮಿನಿ ಸೀಸನ್ ಅಕ್ಟೋಬರ್‌ನಲ್ಲಿ ಮುಕ್ತಾಯವಾಗುವುದು. ಆದರೆ ಇದು ಕೇವಲ 42 ದಿನಗಳ ಕಾಲ ನಡೆಯುವುದು. ಈ ಶೋ ಮೊದಲು ವೂಟ್‌ನಲ್ಲಿ ಪ್ರಸಾರವಾಗುವುದು. ಅದಾದ ನಂತರದಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮತ್ತೊಂದು ಸೀಸನ್ ಪ್ರಸಾರವಾಗುವುದು. ದೊಡ್ಡ ಸೀಸನ್ 100 ದಿನಗಳ ಕಾಲ ನಡೆಯುತ್ತದೆ.

ಓಟಿಟಿಯಲ್ಲಿ ಪ್ರಸಾರವಾಗುವ ಮಿನಿ ಸೀಸನ್‌ನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿ ಪಡೆದ ಕೆಲ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ಅವರು ಆಮೇಲೆ ಟಿವಿ ಶೋಗಳಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ರಾಜ್ಯದ ವಿವಿಧ ರಂಗದ ಕೆಲ ಸೆಲೆಬ್ರಿಟಿಗಳು ಕೂಡ ಭಾಗವಹಿಸಲಿದ್ದಾರೆ. ಈ ಎರಡೂ ಸೀಸನ್‌ನ್ನು ಕಿಚ್ಚ ಸುದೀಪ್  ಅವರೇ ನಿರೂಪಣೆ ಮಾಡುತ್ತಾರೆ.

ಕಿಚ್ಚ ಸುದೀಪ್ ವಾರಾಂತ್ಯದ ಎಲ್ಲ ಎಪಿಸೋಡ್‌ಗಳನ್ನು ನೋಡಿಯೇ ನಿರೂಪಣೆ ಅಖಾಡಕ್ಕೆ ಇಳಿಯುತ್ತಾರೆ. ಅಷ್ಟೇ ಅಲ್ಲದೆ ಶನಿವಾರ ಬೆಳಗ್ಗೆ ಎಲಿಮಿನೇಶನ್ ಸುತ್ತಿನ ಚಿತ್ರೀಕರಣ ನಡೆಯುವುದು, ಅದಾಗಿ ಸಂಜೆಯೇ ಎಪಿಸೋಡ್ ಪ್ರಸಾರ ಆಗುತ್ತದೆ. ಉಳಿದ ಸ್ಟೇಜ್ ಕಾರ್ಯಕ್ರಮ ಶನಿವಾರ ಸಂಜೆ ನಡೆದು, ಮರುದಿನ ಭಾನುವಾರ ಪ್ರಸಾರವಾಗುತ್ತದೆ.

ಸೋಶಿಯಲ್ ಮೀಡಿಯಾದಲ್ಲಿ ಪ್ರತಿಭೆ ಮೂಲಕ ಜನಪ್ರಿಯತೆ ಪಡೆಯುತ್ತಿರುವವರು, ಪಡೆದವರು ತುಂಬ ಜನ ಇದ್ದಾರೆ. ಇವರ ಜೊತೆ ವಿವಿಧ ರಂಗದ ಸೆಲೆಬ್ರಿಟಿಗಳು ಕೂಡ ಇರೋದರಿಂದ ಬಿಗ್ ಬಾಸ್ ಈ ಬಾರಿ ಇನ್ನಷ್ಟು ರೋಚಕವಾಗಿ ಮೂಡಿಬರುವ ಸಾಧ್ಯತೆಯಿದೆ.

- Advertisement -

Latest News

error: Content is protected !!