Saturday, May 4, 2024
Homeತಾಜಾ ಸುದ್ದಿಅಂತೂ ಇಂತೂ ಬಿಗ್ ಬಾಸ್ ಸೀಸನ್ 8 ಆರಂಭಕ್ಕೆ ದಿನಾಂಕ ಫಿಕ್ಸ್ : ಹೊರ...

ಅಂತೂ ಇಂತೂ ಬಿಗ್ ಬಾಸ್ ಸೀಸನ್ 8 ಆರಂಭಕ್ಕೆ ದಿನಾಂಕ ಫಿಕ್ಸ್ : ಹೊರ ಬಿತ್ತು ಅಧಿಕೃತ ಘೋಷಣೆ

spot_img
- Advertisement -
- Advertisement -

ಬೆಂಗಳೂರು: ಅಂತೂ ಇಂತೂ‌ ಬಿಗ್​ ಬಾಸ್​ ಆರಂಭಕ್ಕೆ  ಕೊನೆಗೂ ದಿನಾಂಕ ಫಿಕ್ಸ್​ ಆಗಿದೆ. ಈ ಬಗ್ಗೆ ಅಧಿಕೃತ ಘೋಷಣೆ ಕೂಡ ಆಗಿದೆ.

ಕೊರೊನಾ ವೈರಸ್​ ಕಾಣಿಸಿಕೊಳ್ಳದೆ ಇದ್ದಿದ್ದರೆ ಅಕ್ಟೋಬರ್​-ನವೆಂಬರ್​ ತಿಂಗಳಲ್ಲಿ ಕನ್ನಡ ಬಿಗ್​ ಆರಂಭಗೊಳ್ಳುತ್ತಿತ್ತು. ಆದರೆ, ಈಗ ಕೆಲ ತಿಂಗಳು ಬಿಟ್ಟು ಬಿಗ್​ ಬಾಸ್​ ಸೀಸನ್​ 8 ಆರಂಭಗೊಳ್ಳುತ್ತಿದೆ. ಇತ್ತೀಚೆಗೆ, ಸುದೀಪ್​ ಹೊಸ ಪೋಸ್ಟ್​ ಒಂದನ್ನು ಹಾಕಿದ್ದರು. ಈ ಪೋಸ್ಟ್​ನಲ್ಲಿ ಬಿಗ್​ ಬಾಸ್​ ಸೀಸನ್​ 8 ಪ್ರೋಮೋ ಶೂಟ್​ನಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಎಂದಿದ್ದರು. ಅಂದಹಾಗೆ, ಈ ಬಾರಿ ಬಿಗ್​ ಬಾಸ್ ಸೀಸನ್​ 8ರಲ್ಲಿ ಯಾರೆಲ್ಲ ಪಾಲ್ಗೊಳ್ಳಲಿದ್ದಾರೆ ಎನ್ನುವ ಬಗ್ಗೆಯೂ ಚರ್ಚೆ ಜೋರಾಗಿದೆ.

ಇನ್ನು ಕಲರ್ಸ್ ಕನ್ನಡದ ಬಿಸಿನೆಸ್ ಹೆಡ್‌ ಪರಮೇಶ್ವರ್ ಗುಂಡ್ಕಲ್ ಸುದೀಪ್ ಫೋಟೋ ಒಂದನ್ನು‌ ಶೇರ್ ಮಾಡಿದ್ದು, ಬಿಗ್ ಬಾಸ್ ಪ್ರೊಮೋ ಶೂಟ್ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಅಲ್ಲದೇ ಕಿಚ್ಚನ ಇನ್ನೊಂದು‌ ಫೋಟೋ ಶೇರ್ ಮಾಡಿ, ಫೆಬ್ರವರಿಯಲ್ಲಿ‌ ಬಿಗ್ ಬಾಸ್ ಆರಂಭ ಎಂದಿದ್ದಾರೆ

- Advertisement -
spot_img

Latest News

error: Content is protected !!