Thursday, April 25, 2024
Homeತಾಜಾ ಸುದ್ದಿತಮಿಳುನಾಡಿನಲ್ಲಿ ಆನೆಗೆ ಬೆಂಕಿ ಹಚ್ಚಿದ ಪ್ರಕರಣ: ಎಂಥವರ ಕಣ್ಣಲ್ಲೂ ನೀರು ತರಿಸುತ್ತೆ ಅರಣ್ಯ ಸಿಬ್ಬಂದಿ...

ತಮಿಳುನಾಡಿನಲ್ಲಿ ಆನೆಗೆ ಬೆಂಕಿ ಹಚ್ಚಿದ ಪ್ರಕರಣ: ಎಂಥವರ ಕಣ್ಣಲ್ಲೂ ನೀರು ತರಿಸುತ್ತೆ ಅರಣ್ಯ ಸಿಬ್ಬಂದಿ ಕಣ್ಣೀರಿಡುತ್ತಿರುವ ದೃಶ್ಯ

spot_img
- Advertisement -
- Advertisement -

ತಮಿಳುನಾಡು : ಕಾಡು ಪ್ರದೇಶದಲ್ಲಿ ಎಸ್ಟೇಟ್​ ಒಂದರ ಒಳಗೆ ಬರಲು ಪ್ರಯತ್ನಿಸಿದ ಆನೆಗೆ ಇಬ್ಬರು ದುಷ್ಕರ್ಮಿಗಳು ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಊಟಿಯ ಮಸಿನಗುಡಿ ನಡೆದಿತ್ತು. ಈ ಹೀನ ಕೃತ್ಯದ ವಿಡಿಯೋ ವೈರಲ್ ಆಗಿತ್ತು.

ಈ ಆನೆಯ ಪಾರ್ಥೀವ ಶರೀರವನ್ನು ಅಂತ್ಯಕ್ರಿಯೆಗೆ ಕೊಂಡೊಯ್ಯುವ ವೇಳೆ ಅರಣ್ಯ ಸಿಬ್ಬಂದಿ ಕಣ್ಣೀರಿಟ್ಟಿರುವ  ವೀಡಿಯೋ ಇದೀಗ ವೈರಲ್ ಆಗಿದೆ. ವಿಡಿಯೋ ನೋಡಿದವರ ಕಣ್ಣಾಲಿಗಳು ತೇವಗೊಳ್ಳೋದರಲ್ಲಿ ಸಂದೇಹವೇ ಇಲ್ಲ.

ಊಟಿಯ ಮಸಿನಗುಡಿ ಕಾಡು ಪ್ರದೇಶದಲ್ಲಿ 40 ವರ್ಷದ ಆನೆಯೊಂದು ಜನವರಿ 19ರಂದು ಎಸ್ಟೇಟ್​ ಒಂದರ ಒಳಗೆ ಬರಲು ಪ್ರಯತ್ನಿಸಿದೆ. ಈ ಸಮಯದಲ್ಲಿ ಎಸ್ಟೇಟ್​ ಕಾವಲು ಕಾಯುತ್ತಿದ್ದ ರೈಮಾನ್ ಮತ್ತು ಪ್ರಶಾಂತ್ ಒಂದು ಟೈಯರ್​ಗೆ ಬೆಂಕಿ ಹಚ್ಚಿ ಅದನ್ನು ಆನೆಯ ಮೇಲೆ ಎಸೆದಿದ್ದಾರೆ. ಬೆಂಕಿ ಹೊತ್ತಿ ಉರಿಯುತ್ತಿದ್ದ ಟೈಯರ್​ನ್ನು ಹೊತ್ತ ಆನೆ ನೋವಿನಿಂದ ಕೂಗಿಕೊಳ್ಳುತ್ತ ಸ್ವಲ್ಪ ದೂರ ಹೋಗಿದೆ. ಆನೆಯ ಕಿವಿ ಮತ್ತು ಹಿಂಭಾಗದಲ್ಲಿ ಸುಟ್ಟ ಗಾಯಗಳಾಗಿವೆ.

ಅಸ್ವಸ್ಥವಾಗಿದ್ದ ಆನೆಯನ್ನು ಕಂಡ ಅರಣ್ಯ ಸಿಬ್ಬಂದಿ, ವೈದ್ಯಕೀಯ ಚಿಕಿತ್ಸೆಗೆಂದು ಕರೆದೊಯ್ದಿದ್ದಾರೆ. ಆದರೆ ಅದಾಗಲೇ ಸುಟ್ಟ ಗಾಯದಿಂದ ಸಾಕಷ್ಟು ನೋವುಂಡಿದ್ದ ಆನೆ ಕೊನೆಯುಸಿರೆಳೆದಿದೆ. ಈ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಶಾಂತ್​ ಮತ್ತು ರೆಹಮಾನ್ ಎಂಬ ಇಬ್ಬರನ್ನು ಬಂಧಿಸಲಾಗಿದೆ.

- Advertisement -
spot_img

Latest News

error: Content is protected !!