Friday, May 17, 2024
Homeಕೊಡಗುಕೊಡಗಿನಲ್ಲಿ ಮನೆ ಮೇಲೆ ಉರುಳಿ ಬಿದ್ದ ಬಂಡೆ: ಭೂಕಂಪನದಿಂದಾಗಿ ಬಂಡೆ ಬಿದ್ದಿರುವ ಶಂಕೆ

ಕೊಡಗಿನಲ್ಲಿ ಮನೆ ಮೇಲೆ ಉರುಳಿ ಬಿದ್ದ ಬಂಡೆ: ಭೂಕಂಪನದಿಂದಾಗಿ ಬಂಡೆ ಬಿದ್ದಿರುವ ಶಂಕೆ

spot_img
- Advertisement -
- Advertisement -

ಕೊಡಗು: ದಕ್ಷಿಣಕನ್ನಡ ಜಿಲ್ಲೆಯ ಗಡಿಭಾಗ ಹಾಗೂ ಕೊಡಗು ಜಿಲ್ಲೆಯಲ್ಲಿ ಲಘು ಭೂಕಂಪನದ ಆಘಾತದಲ್ಲಿರುವಾಗಲೇ ಜಿಲ್ಲೆಯ ಕರಿಕೆಯ ಕುಂಡತ್ತಿಕಾನ ಗ್ರಾಮದಲ್ಲಿ ಮನೆಯೊಂದರ ಮೇಲೆ ಬಂಡೆ ಕುಸಿದು ಬಿದ್ದಿದೆ.  ಅದೃಷ್ಟವಶಾತ್ ಮನೆ ಮಾಲೀಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇಲ್ಲಿನ ಕರಿಕೆ ನಿವಾಸಿ ಜಾನಕಿ ಎಂಬುವರ ಮನೆ ಮೇಲೆ ರಾತ್ರಿ ವೇಳೆ ಬಂಡೆಕಲ್ಲು ಉರುಳಿ ಬಿದ್ದಿದೆ. ರಾತ್ರಿ‌ ಮನೆ ವೇಳೆ ಬಂಡೆ ಬಿದ್ದಿದ್ದು, ಮನೆಯ ಮಾಲೀಕರು ಇನ್ನೊಂದು ಕೊಠಡಿಯಲ್ಲಿ ಮಲಗಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಜೂನ್ 26 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.‌ ಕರಿಕೆ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಭೂಮಿ ಕಂಪನವಾಗುತ್ತಿದ್ದು, ಬಂಡೆ ಸಡಿಲಗೊಂಡು ರಾತ್ರಿ ಸಮಯದಲ್ಲಿ ಉರುಳಿ ಬಿದ್ದಿರಬಹುದೆಂದು ಸ್ಥಳೀಯರು ಹೇಳಿದ್ದಾರೆ.

- Advertisement -
spot_img

Latest News

error: Content is protected !!