Saturday, May 18, 2024
Homeಕರಾವಳಿಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆ ದಾಳಿ: ಭಾರೀ ಪ್ರಮಾಣದಲ್ಲಿ ಕೃಷಿಗೆ ಹಾನಿ

ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆ ದಾಳಿ: ಭಾರೀ ಪ್ರಮಾಣದಲ್ಲಿ ಕೃಷಿಗೆ ಹಾನಿ

spot_img
- Advertisement -
- Advertisement -

ಬೆಳ್ತಂಗಡಿ: ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಠದ ಮಜಲು ಸುತ್ತಮುತ್ತಲು ನಿನ್ನೆ ರಾತ್ರಿ ಕಾಡಾನೆಗಳು ದಾಳಿ ನಡೆಸಿದ್ದು ಭಾರೀ ಪ್ರಮಾಣದಲ್ಲಿ ಕೃಷಿಗೆ ಹಾನಿಯುಂಟಾಗಿದೆ.

ಇಲ್ಲಿನ ಅನಂತರಾವ್, ಪ್ರಕಾಶ್ ನಾರಾಯಣ ರಾವ್, ರವೀಂದ್ರ ರಾವ್ ಎಂಬವರ ಕೃಷಿ ತೋಟಗಳಿಗೆ ಸೋಮವಾರ ರಾತ್ರಿ ದಾಳಿ ನಡೆಸಿದ ಕಾಡಾನೆಗಳು ಸುಮಾರು 130 ಅಡಕೆ ಮರ, 6 ತೆಂಗಿನ ಮರ ಹಾಗೂ ನೂರಾರು ಬಾಳೆಗಿಡಗಳನ್ನು ಧ್ವಂಸ ಮಾಡಿವೆ.

ಮರಿಯಾನೆ ಸಹಿತ ಆರರಿಂದ ಏಳು ಕಾಡಾನೆಗಳು ತೋಟಕ್ಕೆ ಬಂದಿವೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು ಉಪ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.

ಈ ಪ್ರದೇಶದಲ್ಲಿ ಆನೆ ದಾಳಿ ತಡೆಗಟ್ಟಲು ಕೃಷಿಕರು ಮುಂಜಾಗ್ರತೆ ಕೈಗೊಂಡರೂ ನಿರಂತರ ದಾಳಿ ಮುಂದುವರೆಯುತ್ತಿದೆ. ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಇಲ್ಲಿನ ಕೃಷಿಕರು ಆಗ್ರಹಿಸಿದ್ದಾರೆ.

- Advertisement -
spot_img

Latest News

error: Content is protected !!