Friday, May 10, 2024
Homeತಾಜಾ ಸುದ್ದಿಕಾಡುಗಳ್ಳ ವೀರಪ್ಪನ್‌ನಿಂದ ಬಚಾವಾಗಿ ಬಂದಿದ್ದ ಭೋಗೇಶ್ವರ ಇನ್ನಿಲ್ಲ

ಕಾಡುಗಳ್ಳ ವೀರಪ್ಪನ್‌ನಿಂದ ಬಚಾವಾಗಿ ಬಂದಿದ್ದ ಭೋಗೇಶ್ವರ ಇನ್ನಿಲ್ಲ

spot_img
- Advertisement -
- Advertisement -

ಮೈಸೂರು: ಕಬಿನಿ ಹಿನ್ನೀರಿನಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ 76ರ “ಭೋಗೇಶ್ವರ’ ಎಂದೇ ಪ್ರಸಿದ್ಧಿಯಾಗಿದ್ದ ಸಲಗ ಕಾಯಿಲೆಯಿಂದ ಮೃತಪಟ್ಟಿದೆ. ಉದ್ದ ದಂತ, ನಡಿಗೆ ಶೈಲಿಯಿಂದ ಇತರೆ ಆನೆಗಳಿಗಿಂತ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದ ಈ ಆನೆ, 4 ಅಡಿಗಿಂತಲೂ ಹೆಚ್ಚು ಉದ್ದವಿರುವ ದಂತಹೊಂದಿತ್ತು. ಈ ದಂತಗಳು ನೆಲಕ್ಕೆ ತಾಕುತ್ತಿದ್ದುದ್ದಲ್ಲದೆ, ಒಂದಕ್ಕೊಂದು ಕೂಡಿಕೊಂಡಿದ್ದು, ಆಹಾರ ಸೇವನೆಗೂ ತೊಡಕಾಗಿತ್ತು.

ಬಂಡೀಪುರ, ನಾಗರಹೊಳೆ ಉದ್ಯಾನದಲ್ಲಿ ಬರುವ ಕಬಿನಿ ಹಿನ್ನೀರಿನಲ್ಲಿ ಬೇಸಿಗೆಯಲ್ಲಿ ಆನೆಗಳ ಹಿಂಡು ಕಾಣಿಸಿಕೊಳ್ಳುತ್ತವೆ. ಈ ಗಜರಾಜ ದರ್ಶನ ನೀಡುವುದು ತೀರಾ ಅಪರೂಪವಾಗಿತ್ತು. ರಾಜ್ಯದಲ್ಲಿ 80 ಹಾಗೂ 90ರದ ದಶಕದಲ್ಲಿ ವೀರಪ್ಪನ್, ಕೇರಳದ ದಂತಚೋರರ ಕಾಟ ಜೋರಾಗಿತ್ತು. ಆ ದಿನಗಳಲ್ಲಿ ನಡೆದ ಆನೆಗಳ ಮಾರಣ ಹೋಮದಿಂದ ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ದಂತಚೋರರ ಕಣ್ಣಿಗೆ ಬೀಳದೆ ಅಳಿದುಳಿದ ಆನೆಗಳಲ್ಲಿ ಈ ಭೋಗೇಶ್ವರ ಆನೆಯೂ ಒಂದು.

- Advertisement -
spot_img

Latest News

error: Content is protected !!