Sunday, June 7, 2026
HomeWorldಪ್ಯಾರಾಲಿಂಪಿಕ್ಸ್‌: ಟೇಬಲ್ ಟೆನಿಸ್ ನಲ್ಲಿ ಫೈನಲ್ ಗೆ ಲಗ್ಗೆ ಇಟ್ಟ ಭವಿನಾ ಪಟೇಲ್!

ಪ್ಯಾರಾಲಿಂಪಿಕ್ಸ್‌: ಟೇಬಲ್ ಟೆನಿಸ್ ನಲ್ಲಿ ಫೈನಲ್ ಗೆ ಲಗ್ಗೆ ಇಟ್ಟ ಭವಿನಾ ಪಟೇಲ್!

- Advertisement -
- Advertisement -

ಟೊಕಿಯೋ: ಪ್ಯಾರಾಲಿಂಪಿಕ್ಸ್‌ನ ಟೇಬಲ್‌ ಟೆನಿಸ್‌ನಲ್ಲಿ ಭಾರತದ ಭವಿನಾ ಪಟೇಲ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದು, ಪದಕ ಗೆಲ್ಲುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದಾರೆ.

ಕಳೆದ ದಿನವೇ ಸೆಮಿಫೈನಲ್ ಪ್ರವೇಶಿಸುವ ಮೂಲಕ ಭಾರತಕ್ಕೆ ಮೊದಲ ಪದಕ ಖಚಿತಪಡಿಸಿರುವ ಭಾವಿನಾ, ಈಗ ಇನ್ನು ಒಂದು ಹೆಜ್ಜೆ ಮುಂದಿಟ್ಟು ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿದ್ದಾರೆ.

ಮಹಿಳೆಯರ ಸಿಂಗಲ್ಸ್ ಕ್ಲಾಸ್‌ 4 ವಿಭಾಗದಲ್ಲಿ ಅಂತಿಮ ನಾಲ್ಕರ ಘಟ್ಟದ ಹೋರಾಟದಲ್ಲಿ ಭಾವಿನಾ, ಚೀನಾದ ಜಾಂಗ್‌ ಮಿಯಾವೊ ವಿರುದ್ಧ 3-2ರಲ್ಲಿ ಗೆಲುವು ಸಾಧಿಸಿದರು.34 ವರ್ಷದ ಭಾವಿನಾ, ವಿಶ್ವ ನಂ.3 ಆಟಗಾರ್ತಿ ವಿರುದ್ಧ 34 ನಿಮಿಷಗಳ ಹೋರಾಟದ ಅಂತ್ಯದಲ್ಲಿ 7-11 11-7 11-4 9-11 11-8ರಲ್ಲಿ ಗೆಲುವು ದಾಖಲಿಸಿದರು.

ಚಿನ್ನದ ಪದಕಕ್ಕಾಗಿ ಹೋರಾಟದಲ್ಲಿ ಭಾವಿನಾ ಈಗ, ವಿಶ್ವ ನಂ.1 ಸ್ಪರ್ಧಿ ಚೀನಾದವರೇ ಆಗಿರುವ ಯಿಂಗ್ ಜೌ ಸವಾಲನ್ನು ಎದುರಿಸಲಿದ್ದಾರೆ.

- Advertisement -

Latest News

error: Content is protected !!