Saturday, June 6, 2026
Homeಚಿಕ್ಕಮಗಳೂರುಚಿಕ್ಕಮಗಳೂರು: ಜಮೀನಿನಲ್ಲಿ ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ಹುಲಿ ದಾಳಿ!

ಚಿಕ್ಕಮಗಳೂರು: ಜಮೀನಿನಲ್ಲಿ ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ಹುಲಿ ದಾಳಿ!

- Advertisement -
- Advertisement -

ಚಿಕ್ಕಮಗಳೂರು: ತಮ್ಮ ಸ್ವಂತ ಜಮೀನಿನಲ್ಲಿ ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ಹುಲಿಯೊಂದು ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ವ್ಯಾಪ್ತಿಯ ಭಾರತಿ ಬೈಲ್ ನಲ್ಲಿ ನಿನ್ನೆ ಸಂಜೆ ನಡೆದಿದೆ.

ಕುತ್ತಿಗೆ, ಬೆನ್ನಿಗೆ, ಹಿಡಿದು ದಾಳಿ ಮಾಡಿ ಕೊಂದು ಹಾಕಿದೆ.ಹತ್ತು ದಿನದ ಕರು ತನ್ನ ತಾಯಿಯನ್ನು ಕಳೆದುಕೊಂಡಿದೆ.ಬಿ ಹೊಸಹಳ್ಳಿ,ಅನುಸೂಯ, ಮತ್ತು ಪ್ರಗತಿ ಅವರಿಗೆ ಸೇರಿದ ಹಸು ಇದಾಗಿದೆ.

ಎರಡು ಮೂರು ವರ್ಷಗಳಿಂದ ಹುಲಿಯ ಹೆಜ್ಜೆ ಕಾಣಿಸಿಕೊಳ್ಳುತ್ತಿದ್ದು, ಹಲವು ಜಾನುವಾರುಗಳ ಮೇಲೆ ದಾಳಿ ಮಾಡಿದೆ ಎಂದು ಸ್ಥಳೀಯರು ದೂರಿದ್ದಾರೆ.

ಹುಲಿ ದಾಳಿಯಿಂದ ಗ್ರಾಮಸ್ಥರು ಮತ್ತು ತೋಟಗಳಿಗೆ ಕೆಲಸಕ್ಕೆ ತೆರಳುವ ಕಾರ್ಮಿಕರು ಭಯಭೀತರಾಗಿದ್ದು,ಸ್ಥಳಕ್ಕೆ ಸ್ಥಳೀಯ ಅರಣ್ಯಾಧಿಕಾರಿಗಳು ಹಾಗು ಇಂದು ಹಿರಿಯ ಅರಣ್ಯ ಅಧಿಕಾರಿಗಳು ಭೇಟಿ ನೀಡಲಿದ್ದಾರೆ ಎಂದು ಹೇಳಲಾಗಿದೆ

- Advertisement -

Latest News

error: Content is protected !!