Thursday, June 4, 2026
Homeತಾಜಾ ಸುದ್ದಿಮಹಿಳೆಯ ಅಪಹರಣ ಪ್ರಕರಣ; ಭವಾನಿ ರೇವಣ್ಣಗೆ ಹೈಕೋರ್ಟ್ ನಿಂದ ಷರತ್ತುಬದ್ಧ ಜಾಮೀನು

ಮಹಿಳೆಯ ಅಪಹರಣ ಪ್ರಕರಣ; ಭವಾನಿ ರೇವಣ್ಣಗೆ ಹೈಕೋರ್ಟ್ ನಿಂದ ಷರತ್ತುಬದ್ಧ ಜಾಮೀನು

- Advertisement -
- Advertisement -

ಬೆಂಗಳೂರು: ಮೈಸೂರಿನ ಕೆ.ಆರ್‌.ನಗರದ  ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಲೆಮರೆಸಿಕೊಂಡಿಡ್ಡ ಭವಾನಿ ರೇವಣ್ಣಗೆ ಹೈಕೋರ್ಟ್ ನಿಂದ ಷರತ್ತುಬದ್ಧ ಜಾಮೀನು ಮಂಜೂರಾಗಿದೆ.

ಹೈಕೋರ್ಟ್  ವಿಧಿಸಿರುವ ಷರತ್ತುಗಳೇನು?

*ವಿಚಾರಣೆ ಹಾಜರಾಗಬೆಕು.

*ಎಸ್‌ಐಟಿ ಅಧಿಕಾರಿಗಳ ತನಿಖೆ, ವಿಚಾರಣೆಗೆ ಸಹಕರಿಸಬೇಕು

*ಭವಾನಿ ರೇವಣ್ಣ ಅವರು ಕೆ.ಆರ್. ನಗರ ಹಾಗೂ ಹಾಸನಕ್ಕೆ ಕಾಲಿಡುವಂತಿಲ್ಲ

ಎಸ್ ಐಟಿ ಅಧಿಕಾರಿಗಳಿಗೆ  ಹೈಕೋರ್ಟ್ ನೀಡಿರುವ ಸೂಚನೆಗಳೇನು?

*ಭವಾನಿ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಬಂಧನ ಮಾಡುವಂತಿಲ್ಲ

* ಸಂಜೆ 5 ಗಂಟೆವರೆಗೆ ಅವರನ್ನು ವಿಚಾರಣೆ ನಡೆಸಬೇಕು. ನಂತರ ಅವರನ್ನು ವಶದಲ್ಲಿ ಇಟ್ಟುಕೊಳ್ಳುವಂತಿಲ್ಲ

ಇನ್ನು ವಿಚಾರಣೆಗೆ ಹಾಜರಾಗುವಂತೆ ಎಸ್ ಐಟಿ ಭವಾನಿ ಅವರಿಗೆ 2 ಬಾರಿ ನೋಟಿಸ್ ಜಾರಿ ಮಾಡಿತ್ತು. ಆದರೂ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಇದೇ ವೇಳೆ ಭವಾನಿಯವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ತಿರಸ್ಕರಿಸಿತ್ತು. ಇದರ ಬೆನ್ನಲ್ಲೆ ಅವರ ವಿರುದ್ಧ ಬಂಧನದ ವಾರೆಂಟ್ ಜಾರಿ ಮಾಡಲಾಗಿತ್ತು.ಇದೀಗ ಹೈಕೋರ್ಟ್ ನಿಂದ ಅವರಿಗೆ ಷರತ್ತು ಬದ್ಧ ಜಾಮೀನು ದೊರಕಿದೆ.

- Advertisement -

Latest News

error: Content is protected !!