Wednesday, June 3, 2026
Homeತಾಜಾ ಸುದ್ದಿರಾಜ್ಯದಲ್ಲಿ ಹಮಾರೆ ಬಾರಹ್ ಹಿಂದಿ ಸಿನಿಮಾ‌ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ

ರಾಜ್ಯದಲ್ಲಿ ಹಮಾರೆ ಬಾರಹ್ ಹಿಂದಿ ಸಿನಿಮಾ‌ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ

- Advertisement -
- Advertisement -

ಬೆಂಗಳೂರು: ರಾಜ್ಯದಲ್ಲಿ ಹಮಾರೆ ಬಾರಹ್ ಹಿಂದಿ ಚಲನಚಿತ್ರವನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮುಸ್ಲಿಂ ಸಂಘಟನೆಗಳಿಂದ ಮನವಿ ಸಲ್ಲಿಸಲ್ಪಟ್ಟಿದ್ದ ಹಿನ್ನೆಲೆಯಲ್ಲಿ ಎರಡು ವಾರದವರೆಗೆ ಹಾಗೂ ಮುಂದಿನ ಆದೇಶದವರಿಗೂ ರಾಜ್ಯದಲ್ಲಿ ಸಿನಿಮಾ ಬಿಡುಗಡೆ ನಿಷೇಧಿಸಲಾಗಿದೆ.

ಕರ್ನಾಟಕ ಸಿನಿಮಾ ರೆಗ್ಯುಲೇಷನ್ ಕಾಯ್ದೆಯ ನಿಯಮದಡಿ ನಿಷೇಧ ಮಾಡಲಾಗಿದ್ದು, ಮುಸ್ಲಿಂ ಧರ್ಮದ ಬಗ್ಗೆ ಸಿನಿಮಾದಲ್ಲಿ ಅವಹೇಳನಕಾರಿಯಾಗಿ ತೋರಿಸಲಾಗಿದೆ ಎಂದು ಮುಸ್ಲಿಂ ಸಂಘಟನೆಗಳಿಂದ ಆರೋಪ ವ್ಯಕ್ತವಾಗಿತ್ತು.

ಸಿನಿಮಾದ ಟ್ರೈಲರ್ ನಲ್ಲಿ ಮುಸ್ಲಿಂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ತೋರಿಸಲಾಗಿದೆ ಎಂದು ಆರೋಪಿಸಲಾಗಿದ್ದು, ಇಂದು ದೇಶಾದ್ಯಂತ ಹಮಾರೆ ಬಾರಹ್ ಸಿನಿಮಾ ಬಿಡುಗಡೆಯಾಗುತ್ತಿದೆ.

- Advertisement -

Latest News

error: Content is protected !!