Monday, June 8, 2026
Homeತಾಜಾ ಸುದ್ದಿಭಾರತ್ ಬಂದ್ ಬಿಸಿಗೆ ಬಸ್ ಸಂಚಾರ ಸ್ಥಗಿತ- ಬಸ್ ಗೆ ಕಾದು ಕುಸಿದು ಬಿದ್ದ ಮಹಿಳೆ!..

ಭಾರತ್ ಬಂದ್ ಬಿಸಿಗೆ ಬಸ್ ಸಂಚಾರ ಸ್ಥಗಿತ- ಬಸ್ ಗೆ ಕಾದು ಕುಸಿದು ಬಿದ್ದ ಮಹಿಳೆ!..

- Advertisement -
- Advertisement -

ಮೈಸೂರು:ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಭಾರತ್ ಬಂದ್ ಹಾಗೂ ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಹೀಗಾಗಿ ಬಸ್ ಗೆ ಕಾದು ಕಾದು ಸುಸ್ತಾದ ಮಹಿಳೆಯೋರ್ವರು ಬಸ್ ನಿಲ್ದಾಣದಲ್ಲೇ ಕುಸಿದು ಬಿದ್ದಿರುವ ಘಟನೆ ವರದಿಯಾಗಿದೆ.

ಅಸ್ವಸ್ಥಗೊಂಡಿರುವ ಮಹಿಳೆಯನ್ನು ಸಧ್ಯ ಕೆ.ಆರ್.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈಕೆ ಬನ್ನೂರಿಗೆ ಹೋಗಲೆಂದು ಮಗಳ ಜೊತೆ ಮೈಸೂರು ಕೇಂದ್ರ ಬಸ್ ನಿಲ್ದಾಣಕ್ಕೆ ಬಂದು, ಬಸ್ ಗಾಗಿ ಕಾಯುತ್ತಿದ್ದ ವೇಳೆ ಘಟನೆ ನಡೆದಿದೆ.

- Advertisement -

Latest News

error: Content is protected !!