Thursday, June 4, 2026
Homeಕರಾವಳಿಬಂಟ್ವಾಳ : ತುಂಬೆ ಪದವಿ ಪೂರ್ವ ಕಾಲೇಜಿನ ಕೆ.ಎನ್.ಗಂಗಾಧರ ಆಳ್ವರಿಗೆ ರಾಜ್ಯ ಮಟ್ಟದ ಉತ್ತಮ...

ಬಂಟ್ವಾಳ : ತುಂಬೆ ಪದವಿ ಪೂರ್ವ ಕಾಲೇಜಿನ ಕೆ.ಎನ್.ಗಂಗಾಧರ ಆಳ್ವರಿಗೆ ರಾಜ್ಯ ಮಟ್ಟದ ಉತ್ತಮ ಪ್ರಾಂಶುಪಾಲ ಪ್ರ ಶಸ್ತಿ

- Advertisement -
- Advertisement -

ಬಂಟ್ವಾಳ : ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎನ್.ಗಂಗಾಧರ ಆಳ್ವ ಅನಂತಾಡಿ ಅವರನ್ನು ರಾಜ್ಯ ಶಿಕ್ಷಣ ಇಲಾಖೆ ನೀಡುವ ರಾಜ್ಯ ಮಟ್ಟದ ಉತ್ತಮ ಪ್ರಾಂಶುಪಾಲ-2022′ ಪ್ರ ಶಸ್ತಿ ಗೆ ಆಯ್ಕೆ ಮಾಡಿದೆ.

ಅವರಿಗೆ ಶಿಕ್ಷಣ ಸಚಿವ ನಾಗೇಶ್ ಅವರು ಬೆಂಗಳೂರಿನ ಶಿಕ್ಷಕರ ಸದನದಲ್ಲಿ ಗುರುವಾರ ಪ್ರ ಶಸ್ತಿ ಪ್ರದಾನ ಮಾಡುವರು. ದಕ್ಷಿಣ ಕನ್ನಡ ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯ ಕ್ಷರಾಗಿರುವ ಗಂಗಾಧರ ಆಳ್ವ, ದ.ಕ. ಹಾಗೂ ಉಡುಪಿ ಜಿಲ್ಲೆಯಿಂದ ಈ ಪ್ರ ಶಸ್ತಿ ಗೆ ಆಯ್ಕೆಯಾಗಿರುವ ಏಕೈಕ ಪ್ರಾಂಶುಪಾಲರಾಗಿದ್ದಾರೆ.

33 ವರ್ಷಗಳ ಬೋಧನಾ ಅನುಭವ ಹೊಂದಿರುವ ಅವರು ಎರಡೂವರೆ ದಶಕಗಳಿಂದ ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿದ್ದಾರೆ. ವಿಟ್ಲ ಅಧ್ಯಾಪಕರ ಸಂಘ, ಉಪನ್ಯಾಸಕರ ಸಹಕಾರಿ ಸಂಘದ ನಿರ್ದೇಶಕರಾಗಿರುವ ಇವರು ಮಾಣಿಯ ವಿದ್ಯಾವರ್ಧಕ ಸಂಘದ ಸದಸ್ಯರಾಗಿದ್ದಾರೆ. ಉತ್ತಮ ಸಂಘಟಕರಾಗಿರುವ ಗಂಗಾಧರ ಆಳ್ವ 2017ರ ‘ರಾಜ್ಯ ಜ್ಞಾನ ಸಂಜೀವಿನಿ ಪ್ರ ಶಸ್ತಿ ‘, 2012ರ ‘ಶಾಮರಾವ್ ಉತ್ತಮ ಶಿಕ್ಷಕ ಪ್ರ ಶಸ್ತಿ ‘, ‘ವಚನ ಕಮ್ಮ ಟ ಪ್ರ ಶಸ್ತಿ ‘, ರೋಟರಿ ಕ್ಲಬ್ ‘ನ್ಯಾ ಷನ್ ಬಿಲ್ಡ ರ್’ ಪ್ರ ಶಸ್ತಿ ಗೆ ಭಾಜನರಾಗಿದ್ದಾರೆ.

- Advertisement -

Latest News

error: Content is protected !!