Saturday, April 20, 2024
Homeತಾಜಾ ಸುದ್ದಿಡಿವೈಎಸ್‌ಪಿ ಲಕ್ಷ್ಮಿ ಆತ್ಮಹತ್ಯೆ ಪ್ರಕರಣ: ಪರಪುರುಷನ ಜೊತೆಗಿನ ಕುಚ್‌-ಕುಚ್‌ ಸ್ಟೋರಿಯೇ ಸಾವಿಗೆ ಕಾರಣವಾಯ್ತಾ ?

ಡಿವೈಎಸ್‌ಪಿ ಲಕ್ಷ್ಮಿ ಆತ್ಮಹತ್ಯೆ ಪ್ರಕರಣ: ಪರಪುರುಷನ ಜೊತೆಗಿನ ಕುಚ್‌-ಕುಚ್‌ ಸ್ಟೋರಿಯೇ ಸಾವಿಗೆ ಕಾರಣವಾಯ್ತಾ ?

spot_img
- Advertisement -
- Advertisement -

ಬೆಂಗಳೂರು: ಡಿವೈಎಸ್‌ಪಿ ಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಸಂಬಂಧಪಟ್ಟಂತೆ ತನಿಖೆ ಚುರುಕು ಪಡೆದುಕೊಂಡಿದ್ದು, ದಿನದಿಂದ ದಿನಕ್ಕೆ ನಾನಾ ರೀತಿಯ ತಿರುವು ಪಡೆದುಕೊಳ್ಳುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಪತಿಯಿಂದ ದೂರಿವಿದ್ದ ಡಿವೈಎಸ್‌ಪಿ ಲಕ್ಷ್ಮಿ ಅವರು ತಮ್ಮ ಸ್ನೇಹಿತ ಜೊತೆಗೆ ಅಕ್ರಮ ಸಂಬಂಧವನ್ನು ಹೊಂದಿದ್ದರು ಎನ್ನುವ ಸ್ಪೋಟಕ ಮಾಹಿತಿಯೊಂದು ಹರಿದಾಡುತ್ತಿದೆ.

ಪರಿಚಯಸ್ಥರ ಮೂಲಕ ಬಿಬಿಎಂಪಿಯ ಆರ್.ಆರ್ ನಗರದ ಜೆಸಿ ಜೊತೆಗೆ ಲಕ್ಷ್ಮಿ ಅವರಿಗೆ ಸ್ನೇಹ ಬೆಳೆದಿತ್ತು ನಂತರ ಜೆಸಿ ಆಗಿದ್ದ ವ್ಯಕ್ತಿ ಬಿಬಿಎಂಪಿ ಗುತ್ತಿಗೆದಾರ ಮನು ಪರಿಚಯ ಮಾಡಿಸಿದ್ದ ಎನ್ನಲಾಗಿದೆ. ನಂತರ ಮನು ಹಾಗೂ ಲಕ್ಷ್ಮಿ ಇಬ್ಬರ ನಡುವೆ ತೀರ ಆಪ್ತ ಸಂಬಂಧ ಏರ್ಪಟ್ಟಿದ್ದು ಮನುನನ್ನು ಲಕ್ಷ್ಮಿ ತೀರ ಹಚ್ಚಿಕೊಂಡಿದ್ದರು, ಲಾಕ್‌ ಡೌನ್‌ ಟೈಮ್‌ ಅನ್ನೋಂದು ಇವರಿಬ್ಬರನ್ನು ಇನ್ನಿಲ್ಲದ ಹಾಗೇ ಹತ್ತಿರ ಮಾಡಿತ್ತು ಎನ್ನಲಾಗಿದೆ.

ಇದಲ್ಲದೇ ಈ ಹಿಂದೆ ಮನು ಫೋನ್ ರಿಸೀವ್ ಮಾಡದಿದ್ದಾಗ ಕೂಡ ಲಕ್ಷ್ಮಿ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗುತ್ತಿದ್ದು, ಲಕ್ಷ್ಮಿ ಮನು ವಿಷಯದಲ್ಲಿ ತೀರ ಸೆನ್ಸಿಟಿವ್‌ ಆಗಿ ನಡೆದುಕೊಳ್ಳುತ್ತಿದ್ದರಂತೆ. ಇದಲ್ಲದೇ ಲಕ್ಷ್ಮಿ ಆತ್ಮಹತ್ಯೆ ಮಾಡಿಕೊಳ್ಳುವ ದಿನ ನಡೆದ ಪಾರ್ಟಿಯಲ್ಲಿ ಗುಂಡಿನ ಗಮ್ಮತ್ತಿನಲ್ಲಿ ಇದ್ದರು ಎನ್ನಲಾಗಿದೆ.

ಇದಕ್ಕೆ ಪೂರಕ ಎಂಬಂತೆ ಸಿಐಡಿ ಡಿವೈಎಸ್ಪಿ ವಿ. ಲಕ್ಷ್ಮಿ ಆತ್ಮಹತ್ಯೆ ಪ್ರಕರಣ ಸಂಬಂಧ, ಅವರ ಸ್ನೇಹಿತ ಸೇರಿ ನಾಲ್ವರನ್ನು ಅನ್ನಪೂರ್ಣೆಶ್ವರಿ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ‘ಕೋಣನಕುಂಟೆ ನಿವಾಸಿ ಆಗಿದ್ದ ಲಕ್ಷ್ಮಿ, ನಾಗರಬಾವಿಯಲ್ಲಿರುವ ಸ್ನೇಹಿತನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಲಕ್ಷ್ಮಿ ಅವರ ತಂದೆ ವೆಂಕಟೇಶ್ ದೂರು ನೀಡಿದ್ದಾರೆ. ಅದರನ್ವಯ ಸ್ನೇಹಿತ ಮನೋಹರ್, ಪ್ರಜ್ವಲ್, ವಸಂತ್ ಹಾಗೂ ರಂಜಿತ್‌ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ.

ಒಟ್ಟಿನಲ್ಲಿ ಲಕ್ಷ್ಮಿ ಅವರ ಬಗ್ಗೆ ಹರಿದಾಡುತ್ತಿರುವ ಅನೈತಿಕ ಸಂಬಂಧದ ಬಗ್ಗೆ ಪೊಲೀಸ್‌ ಇಲಾಖೆಯ ತನಿಖೆಯಿಂದಲೇ ತಿಳಿದು ಬರಬೇಕಾಗಿದ್ದು, ಲಕ್ಷ್ಮಿ ಅವರ ಚಾರಿತ್ರ್ಯದ ಬಗ್ಗೆ ನಾನಾ ಮಂದಿ ನಾನಾ ರೀತಿಯಲ್ಲಿ ಮಾತನಾಡುತ್ತಿದ್ದು, ಈ ಬಗ್ಗೆ ಸತ್ಯ ಹೊರ ಬಂದರೇ ಎಲ್ಲದಕ್ಕೂ ಉತ್ತರ ಸಿಗಲಿದೆ.

- Advertisement -
spot_img

Latest News

error: Content is protected !!