Friday, May 3, 2024
Homeತಾಜಾ ಸುದ್ದಿಫೇಸ್ ಬುಕ್ ಗೆಳೆಯನೊಂದಿಗೆ ಗೃಹಿಣಿ ಪರಾರಿ

ಫೇಸ್ ಬುಕ್ ಗೆಳೆಯನೊಂದಿಗೆ ಗೃಹಿಣಿ ಪರಾರಿ

spot_img
- Advertisement -
- Advertisement -

ಮೈಸೂರು: ಫೇಸ್‌ಬುಕ್ ಮೂಲಕ ಪರಿಚಯವಾದ ಗೆಳೆಯನೊಂದಿಗೆ ಗೃಹಿಣಿ ಪರಾರಿಯಾಗಿರುವ ಘಟನೆ ಮೈಸೂರು ಜಿಲ್ಲೆ ಟೀ ನರಸೀಪುರದಲ್ಲಿ ನಡೆದಿದೆ.

ಟಿ. ನರಸೀಪುರದ ಸರಕಾರಿ ಆಸ್ಪತ್ರೆಯ ವಾಟರ್ ಟ್ಯಾಂಕ್ ಬಳಿಯ ನಿವಾಸಿಯಾಗಿದ್ದ ಮಹಿಳೆಯೊಬ್ಬರು ಕಳೆದ ತಿಂಗಳು ಮನೆಯಿಂದ ಕಾಣೆಯಾಗಿದ್ದರು. ಈಕೆಗೆ ಮದುವೆಯಾಗಿ 5 ವರ್ಷ ಕಳೆದಿವೆ. ಆದರೆ ಮಕ್ಕಳಾಗಿರಲಿಲ್ಲ.. ಈಕೆ ಕಾಣೆಯಾದ ನಂತರ ಈಕೆಯ ಪತಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಆಕೆಯ ಪತಿಯ ದೂರಿನನ್ವಯ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ನಂತರ ಈಕೆ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ಗ್ರಾಮದಲ್ಲಿ ಇರುವುದು ಗೊತ್ತಾಗಿದೆ. ಕಳೆದ 2 ವರ್ಷಗಳ ಹಿಂದೆ ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದ ಯುವಕನೊಂದಿಗೆ ಆಕೆ ಹೋಗಿದ್ದಾಳೆ ಅನ್ನೋ ಮಾಹಿತಿ ಲಭ್ಯವಾಗಿದೆ.

- Advertisement -
spot_img

Latest News

error: Content is protected !!