Sunday, May 12, 2024
Homeತಾಜಾ ಸುದ್ದಿಬೆಂಗಳೂರು: ಫ್ರೀ ಟಿಕೆಟ್ ಅಂತಾ ಇಡೀ ಬಸ್ಸನ್ನೇ ಬುಕ್ ಮಾಡಲು ಬಂದ ಮಹಿಳೆ; ಆಮೇಲೇನಾಯ್ತು ಗೊತ್ತಾ?

ಬೆಂಗಳೂರು: ಫ್ರೀ ಟಿಕೆಟ್ ಅಂತಾ ಇಡೀ ಬಸ್ಸನ್ನೇ ಬುಕ್ ಮಾಡಲು ಬಂದ ಮಹಿಳೆ; ಆಮೇಲೇನಾಯ್ತು ಗೊತ್ತಾ?

spot_img
- Advertisement -
- Advertisement -

ಬೆಂಗಳೂರು: ಫ್ರೀ ಟಿಕೆಟ್ ಅಂತಾ ಇಡೀ ಬಸ್ಸನ್ನೇ ಬುಕ್ ಮಾಡಲು ಮಹಿಳೆಯೊಬ್ಬರು ಬಂದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗ​ಳೂ​ರಿನ ಬ್ಯಾಡರಹಳ್ಳಿಯ ನಿವಾಸಿ ಸುನಂದಾ ಎಂಬುವರು ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ವಿಚಾರಣಾ ಕೇಂದ್ರಕ್ಕೆ ಬಂದು, ಯಾವ ಧಾರ್ಮಿಕ ಕ್ಷೇತ್ರಗಳಿಗೆ ಎಷ್ಟು ಗಂಟೆಗೆ ಬಸ್‌ಗಳು ಇವೆ ಎಂಬಿತ್ಯಾದಿ ಮಾಹಿತಿಯನ್ನು ಕಲೆ ಹಾಕಿ ಬರೆದಿಟ್ಟುಕೊಂಡಿದ್ದಾರೆ.ಧಾರ್ಮಿಕ ಕ್ಷೇತ್ರಗಳಿಗೆ ಮಹಿಳಾ ತಂಡದೊಂದಿಗೆ ಹೋಗಲು ಪ್ಲಾನ್ ಮಾಡಿಕೊಂಡಿರುವ ಆಕೆ, ಈಗಾಗಲೇ 20 ಮಹಿಳೆಯರ ತಂಡ ಮಾಡಿಕೊಂಡಿದ್ದರು. ಮಹಿಳಾ ಸಂಘಗಳು, ಕುಟುಂಬದವರು ಸೇರಿ 25 ಮಹಿಳೆಯರನ್ನು ಒಗ್ಗೂಡಿಸಿ ಒಟ್ಟು 45 ಮಂದಿ ಧಾರ್ಮಿಕ ಕ್ಷೇತ್ರಗಳ ದರ್ಶನಕ್ಕೆ ತೆರಳುವ ಯೋಜನೆಯನ್ನು ರೂಪಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.

ಹಾಗಾಗಿ ಆ ಮಹಿಳೆ ಅಧಿಕಾರಿಗಳ ಬಳಿ 48 ಆಸನಗಳಿರುವ ಬಸ್‌ ಬುಕ್ಕಿಂಗ್‌ ಮಾಡುವ ಬಗ್ಗೆ ವಿಚಾರಿಸಿದ್ದಾರೆ. ಆದರೆ ಆ ಮಹಿಳೆಯ ಬೇಡಿಕೆಗೆ ಅಧಿಕಾರಿಗಳು ಅನುಮತಿ ನೀಡಿಲ್ಲ.ಏಕೆಂದರೆ ಬಸ್​ಗಳಲ್ಲಿ ಶೇ 50 ಆಸನಗಳು ಮಾತ್ರ ಮಹಿಳೆಯರಿಗೆ ಮೀಸಲಾಗಿವೆ. ಉಳಿದ 50 ರಷ್ಟು ಸೀಟುಗಳು ಪುರುಷರಿಗೆ ಮೀಸಲು ಎಂದು ಈಗಾಗಲೇ ಸರ್ಕಾರ ಸ್ಪಷ್ಟಪಡಿಸಿದೆ. ಅಲ್ಲದೆ ಪ್ರವಾಸ ಅಥವಾ ಇನ್ನಿತರ ಕಾರ್ಯಗಳಿಗೆ ತೆರಳಲು ಕೆಎಸ್‌ಆರ್‌ಟಿಸಿ ನಿಯಮಗಳ ಪ್ರಕಾರ ಪ್ರತ್ಯೇಕವಾಗಿ ಹಣ ಕೊಟ್ಟು ಬಸ್‌ ಬುಕ್ಕಿಂಗ್‌ ಮಾಡಿಕೊಳ್ಳಬೇಕೆಂದು ಹೇಳಿ ಮಹಿಳೆಗೆ ತಿಳಿಸಿರುವುದಾಗಿ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

- Advertisement -
spot_img

Latest News

error: Content is protected !!