Thursday, June 4, 2026
Homeತಾಜಾ ಸುದ್ದಿಧರ್ಮಸ್ಥಳ ಕ್ಷೇತ್ರಕ್ಕೆ ಅಗಮಿಸಿದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮತ್ತು ಬೆಂಬಲಿಗರಿಂದ ಅಣೆಪ್ರಮಾಣ

ಧರ್ಮಸ್ಥಳ ಕ್ಷೇತ್ರಕ್ಕೆ ಅಗಮಿಸಿದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮತ್ತು ಬೆಂಬಲಿಗರಿಂದ ಅಣೆಪ್ರಮಾಣ

- Advertisement -
- Advertisement -

ಬೆಳ್ತಂಗಡಿ: ಮರಳು ಲಾರಿಗಳಿಂದ ಹರತಾಳು ಹಾಲಪ್ಪ ಅವರು ತನ್ನ ಬೆಂಬಲಿಗರ ಮೂಲಕ ಹಣ ವಸೂಲಿ ಪಡೆಯುತ್ತಿದ್ದಾರೆ ಎಂದು ಮಾಜಿ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಆರೋಪ ಮಾಡಿದ್ದು ಅದರಂತೆ ಧರ್ಮಸ್ಥಳ ಕ್ಷೇತ್ರದಲ್ಲಿ ಅಣೆಪ್ರಮಾಣ ಮಾಡಲು ದಿನಾಂಕ ಸೂಚಿಸಿದ್ದರು. ಅದರಂತೆ ಇಂದು ಬೆಳಗ್ಗೆ ಶಾಸಕ ಹರತಾಳು ಹಾಲಪ್ಪ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಇಂದು ಬೆಳಗ್ಗೆ 8:30 ರ ಸುಮಾರಿಗೆ ಅಗಮಿಸಿ ದೇವರ ದರ್ಶನ ಪಡೆದು ದೇವರ ಮುಂದೆ ಹಾಲಪ್ಪ ಮತ್ತು ತನ್ನ ಬೆಂಬಲಿಗರು ಬಂದು ಪ್ರಮಾಣ ಮಾಡಿದ ಘಟನೆಗಳ ಬಗ್ಗೆ ವಿವರಿಸಿ ಅವರ ಆಶಿರ್ವಾದ ಪಡೆದುಕೊಂಡರು.

ಬಳಿಕ ಮಾಧ್ಯಮಗಳಿಗೆ ಅಣೆಪ್ರಮಾಣ ಮಾಡಿದ ಬಗ್ಗೆ ವಿವರಣೆ ನೀಡಿ ವಾಪಸ್ ಅಗಿದ್ದು ಅದರಂತೆ ಕಾಂಗ್ರೆಸ್ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮತ್ತು ಬೆಂಬಲಿಗರೊಂದಿಗೆ 11 ಗಂಟೆಗೆ ಅಗಮಿಸಿದ್ದು ಮಾಧ್ಯಮದ ಮುಂದೆ “ನಾನು 12 ಗಂಟೆಗೆ ಧರ್ಮಸ್ಥಳ ಕ್ಷೇತ್ರಕ್ಕೆ ಅಣೆಪ್ರಮಾಣ ಮಾಡಲು ಅಗಮಿಸಲು ನಿಗದಿ ಮಾಡಿದ್ದು ಅವರು ಬೇಗಬಂದು ಹೋಗಿದ್ದಾರೆ” ಎಂದು ಹೇಳಿ ದೇವರ ದರ್ಶನ ಪಡೆದು ನಂತರ ವಾಪಸ್ ಅಗಿ ಮಾಧ್ಯಮಗಳಿಗೆ ನಾನು ಕೂಡ ದೇವರ ಮುಂದೆ ಅಣೆಪ್ರಮಾಣ ಮಾಡಿದ್ದೇನೆ ಎಂದು ಹೇಳಿಕೆ ನೀಡಿ ಧರ್ಮಾಧಿಕಾರಿಗಳನ್ನು ಭೇಟಿ ಮಾಡಿ ವಾಪಸ್ ತೆರಳಿದ್ದಾರೆ.

- Advertisement -

Latest News

error: Content is protected !!