Wednesday, June 24, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಸಾರ್ವಜನಿಕ ಆಸ್ಪತ್ರೆಯ ಫಾರ್ಮಸಿ ಅಧಿಕಾರಿ ಚಂದ್ರಶೇಖರ್ ಅಮಾನತು

ಬೆಳ್ತಂಗಡಿ : ಸಾರ್ವಜನಿಕ ಆಸ್ಪತ್ರೆಯ ಫಾರ್ಮಸಿ ಅಧಿಕಾರಿ ಚಂದ್ರಶೇಖರ್ ಅಮಾನತು

- Advertisement -
- Advertisement -

ಬೆಳ್ತಂಗಡಿ:ಸರ್ಕಾರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ನೌಕರರೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಆಸ್ಪತ್ರೆಯ ಫಾರ್ಮಸಿ ಅಧಿಕಾರಿ ಚಂದ್ರಶೇಖರ್ ಅವರನ್ನು ಅಮಾನತು ಜೂ.23 ರಂದು ಮಾಡಲಾಗಿದೆ.

ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತಿದ್ದ ಮಹಿಳಾ ಸಿಬ್ಬಂದಿಯೊಬ್ಬರಿಗೆ ಚಂದ್ರಶೇಖರ್ ಅವರು ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ದೂರು  ನೀಡಿದ್ದು, ಈ ಬಗ್ಗೆ ಅಂತರಿಕ ದೂರು ಸಮಿತಿ ಸಭೆ ನಡೆಸಿ  ಫಾರ್ಮಸಿ  ಅಧಿಕಾರಿ ಚಂದ್ರ ಶೇಖರ್ ವಿರುದ್ಧ ಕಾನೂನು ಅಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ  ಮತ್ತು ಕುಟುಂಬ ಕಲ್ಯಾಣಧಿಕಾರಿಗಳು ಕೋರಿದ್ದು  ಸದರಿ  ಸಲ್ಲಿಸಿದ ದಾಖಲಾತಿಗಳನ್ನು ಪರಿಶೀಲಿಸಲಾಗಿ ಅಗತ್ಯ ಸೂಕ್ತ ದಾಖಲೆಗಳು  ಹಾಗೂ ಅಂತರಿಕ  ದೂರು ಸಮಿತಿ ಸಭೆಯ ಅಭಿಪ್ರಾಯ ಮತ್ತು ಶಿಫಾರಸ್ಸು ಇಲ್ಲದೇ ಇದುದರಿಂದ ಸಮಿತಿಯಿಂದ ದಾಖಲಾತಿಗಳನ್ನು  ಪಡೆದು  ಹಾಗೂ ಎಫ್ ಐ ಆರ್ ಸೇರಿದಂತೆ  ಸಾಕ್ಷಿದಾರರ ಲಿಖಿತ ಹೇಳಿಕೆಯನ್ನು ಹಾಗೂ ದೂರುದಾರರು ತನಿಖೆಗೆ ಹಾಜರಾಗದೇ  ಇರುವುದನ್ನು ಗಂಭೀರವಾಗಿ ಪರಿಗಣಿಸಿ ಚಂದ್ರಶೇಖರ್ ವಿರುದ್ದದ ಆರೋಪ ಮೇಲ್ನೊಟ್ಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ  ಕೆಸಿ ಎಸ್ ನಡತೆ  ನಿಯಮ 2021 ನಿಯಮ   3(1)(2)(3)ನ್ನು ಉಲ್ಲಂಘಿಸುವ ಮೂಲಕ  ಸರ್ಕಾರಿ ನೌಕರರಿಗೆ ತರವಲ್ಲದ ರೀತಿಯಲ್ಲಿ ನಡೆದುಕೊಂಡಿರುವುದರಿಂದ ಇವರ ವಿರುದ್ಧ ಆರೋಪಕ್ಕೆ   ಸಂಬಂಧಿಸಿದಂತೆ ಇಲಾಖಾ ವಿಚಾರಣೆ ಬಾಕಿ ಇರಿಸಿ ಅಮಾನತ್ತುಗೊಳಿಸಲು ತೀರ್ಮಾನಿಸಿ ಪ್ರಸ್ತಾವನೆಯಲ್ಲಿ ವಿವರಿಸಲಾದ ಕಾರಣಗಳಿಗಾಗಿ ಕರ್ನಾಟಕ ನಾಗರೀಕ  ಸೇವಾ (ವರ್ಗಿಕರಣ,ನಿಯಂತ್ರಣ,ಮತ್ತು ಮೇಲ್ಮನವಿ)  1957  ನಿಯಮ 10(1) (ಬಿ) ರ ಮೇರೆಗೆ ಡಾ. ರಜನಿ ಎಂ ನಿರ್ದೇಶಕರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಬೆಂಗಳೂರು ಇವರು ಚಂದ್ರಶೇಖರ್ ಅವರ ಮೇಲೆ ಕರ್ತವ್ಯಲೋಪ, ದುರ್ನಡತೆ, ಕರ್ತವ್ಯ ನಿರ್ಲಕ್ಷ್ಯತೆ  ಆರೋಪದ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಸರ್ಕಾರಿ ಸೇವೆಯಿಂದ ಅಮಾನತ್ತಿನಲ್ಲಿಟ್ಟು, ಅಮಾನತ್ತಿನ ಸಮಯದಲ್ಲಿ ಸಕ್ಷಮ ಪ್ರಾಧಿಕಾರಿಗಳ ಪೂರ್ವಾನುಮತಿ ಪಡೆಯದೇ ಕೇಂದ್ರ ಸ್ಥಾನ ಬಿಡ ತಕ್ಕುದಲ್ಲವೆಂದು ಆದೇಶಿಸಿದ್ದಾರೆ.

- Advertisement -

Latest News

error: Content is protected !!