Friday, June 5, 2026
Homeಕರಾವಳಿಬೆಳ್ತಂಗಡಿ: ಖ್ಯಾತ ಟಯರ್ ಉದ್ಯಮಿ ಪ್ರಕಾಶ್ ತುಳುಪುಲೆ ಆತ್ಮಹತ್ಯೆಗೆ ಶರಣು

ಬೆಳ್ತಂಗಡಿ: ಖ್ಯಾತ ಟಯರ್ ಉದ್ಯಮಿ ಪ್ರಕಾಶ್ ತುಳುಪುಲೆ ಆತ್ಮಹತ್ಯೆಗೆ ಶರಣು

- Advertisement -
- Advertisement -

ಬೆಳ್ತಂಗಡಿ: ನಗರದ ಎಮ್.ಆರ್.ಎಫ್ ಟಯರ್ ಶೋ ರೂಮ್ ನ ಮಾಲಕ ಪ್ರಕಾಶ್ ತುಳುಪುಳೆ(50ವ) ಇಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ತಮ್ಮ ಉದ್ಯಮದ ಮೂಲಕ ಬೆಳ್ತಂಗಡಿ ನಗರದ ಜನತೆಗೆ ಪ್ರಕಾಶ್ ತುಳುಪುಲೆ ಚಿರಪರಿಚಿತರಾಗಿದ್ದು, ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

ಇಂದು ಸಂಜೆ 5.30ರ ಸುಮಾರಿಗೆ ತಮ್ಮ ಮನೆ ಮುಂಭಾಗದಲ್ಲೇ ಇರುವ ಮಳಿಗೆ ಬಂದ್ ಮಾಡಿ ಮನೆಗೆ ತೆರಳಿದ್ದರು. ಆ ಬಳಿಕ, ಮನೆ ಹಿಂಭಾಗದ ಶೆಡ್ ಬಳಿಗೆ ಹೋಗಿ ಬರುವುದಾಗಿ ತಮ್ಮ ಮಗಳ ಬಳಿ ತಿಳಿಸಿದ್ದರು. ಬಹಳ ಹೊತ್ತಾದರೂ ಅಪ್ಪ ಮರಳದಿರುವುದನ್ನು ಕಂಡು ಅವರ ಮಗಳು ಹೊರಬಂದು ನೋಡಿದಾಗ ಪ್ರಕಾಶ್ ಅವರ ಚಪ್ಪಲಿ ಬಾವಿಯ ಸಮೀಪ ಕಂಡಿದೆ. ಇದರಿಂದ ಅನುಮಾನಗೊಂಡ ಮಗಳು ಆತಂಕದಲ್ಲಿ ಕೂಗಿಕೊಂಡಾಗ ಅಕ್ಕಪಕ್ಕದವರು ಗಾಬರಿಗೊಂಡು ಬಂದು ಬಾವಿಯಲ್ಲಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಬಳಿಕ ಇಸ್ಮಾಯಿಲ್ ಎಂಬುವವರು ಬಾವಿಗೆ ಇಳಿದು ತಳಕ್ಕೆ ಹೋಗಿದ್ದ ಪ್ರಕಾಶ್ ಅವರ ದೇಹವನ್ನು ಮೆಲಕ್ಕೆತ್ತಿ ತಕ್ಷಣವೇ ಆಸ್ಪತ್ರೆಗೆ ರವಾನಿಸುವಲ್ಲಿ ಸಹಕರಿಸಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಪ್ರಕಾಶ್ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.

- Advertisement -

Latest News

error: Content is protected !!