Monday, June 8, 2026
Homeಕರಾವಳಿಉಡುಪಿದಕ್ಷಿಣಕನ್ನಡ ಹಾಗೂ ಉಡುಪಿಯಲ್ಲಿ ಇಂದೂ ಕೂಡ 200 ರ ದಾಟಿದ ಕೊರೊನಾ ಕೇಸುಗಳ ಸಂಖ್ಯೆ

ದಕ್ಷಿಣಕನ್ನಡ ಹಾಗೂ ಉಡುಪಿಯಲ್ಲಿ ಇಂದೂ ಕೂಡ 200 ರ ದಾಟಿದ ಕೊರೊನಾ ಕೇಸುಗಳ ಸಂಖ್ಯೆ

- Advertisement -
- Advertisement -

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದೂ ಕೂಡ 200ಕ್ಕೂ ಹೆಚ್ಚು ಕೊರೊನಾ ಕೇಸುಗಳು ಪತ್ತೆಯಾಗಿವೆ. 229 ಪ್ರಕರಣಗಳು ವರದಿಯಾಗಿವೆ. ಆ ಮೂಲಕ ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 7,820ಕ್ಕೇರಿದೆ. 7 ಮಂದಿ ಇಂದು ಕೋವಿಡ್ ನಿಂದಾಗಿ ಸಾವನ್ನಪ್ಪಿದ್ದಾರೆ. 498 ಜನ ಇಂದು ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 2,353 ಸಕ್ರಿಯ ಪ್ರಕರಣಗಳಿದ್ದು, 5,223 ಮಂದಿ ಇದುವೆರಗೂ ಗುಣಮುಖರಾಗಿದ್ದಾರೆ. 242 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

ಇನ್ನು ಉಡುಪಿಯಲ್ಲಿ ಕೋವಿಡ್ ಆರ್ಭಟ ಜೋರಾಗಿದ್ದು 263 ಕೇಸುಗಳು ಪತ್ತೆಯಾಗಿವೆ. ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 6,772ಕ್ಕೆ ಏರಿಕೆಯಾಗಿದೆ.3 ಮಂದಿ ಕೊರೊನಾದಿಂದ ಇಂದು ಸಾವನ್ನಪ್ಪಿದ್ದಾರೆ. ಹಾಗೇ 225 ಮಂದಿ ಇವತ್ತು ಡಿಸ್ಟಾರ್ಜ್ ಆಗಿದ್ದಾರೆ. ಸದ್ಯ 2,855 ಸಕ್ರಿಯ ಪ್ರಕರಣಗಳಿದ್ದು,3,848 ಮಂದಿ ಗುಣಮುಖರಾಗಿದ್ದಾರೆ. ಇದುವೆರಗೂ ಹೆಮ್ಮಾರಿಗೆ 69 ಜನ ಬಲಿಯಾಗಿದ್ದಾರೆ.

- Advertisement -

Latest News

error: Content is protected !!