Friday, June 5, 2026
Homeತಾಜಾ ಸುದ್ದಿಚಿಕ್ಕಮಗಳೂರಿನಲ್ಲಿ ಹೀಗೊಬ್ಬಳು ಗಟ್ಟಿಗಿತ್ತಿ, ಮಚ್ಚು ಹಿಡಿದು ಚಿನ್ನದಂಗಡಿಗೆ ನುಗ್ಗಿದ ಕಳ್ಳನಿಗೆ ಗೂಸಾ ಕೊಟ್ಟ ಲೇಡಿ ಬಾಂಡ್..

ಚಿಕ್ಕಮಗಳೂರಿನಲ್ಲಿ ಹೀಗೊಬ್ಬಳು ಗಟ್ಟಿಗಿತ್ತಿ, ಮಚ್ಚು ಹಿಡಿದು ಚಿನ್ನದಂಗಡಿಗೆ ನುಗ್ಗಿದ ಕಳ್ಳನಿಗೆ ಗೂಸಾ ಕೊಟ್ಟ ಲೇಡಿ ಬಾಂಡ್..

- Advertisement -
- Advertisement -

ಚಿಕ್ಕಮಗಳೂರು:  ಮಹಿಳೆ ಒಲಿದರೆ ನಾರಿ, ಮುನಿದರೆ ಮಾರಿ ಅನ್ನೋದಕ್ಕೆ ನಿದರ್ಶನದಂತಿದೆ ಈ ಘಟನೆ. ಅಲ್ಲದೇ ಹೆಣ್ಣುಮಕ್ಕಳಿಗೆ ಧೈರ್ಯವಿದ್ದರೆ ಎಂತಹ ಸನ್ನಿವೇಶವನ್ನಾದರೂ ಎದುರಿಸಬಹುದು ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ.

ಅಷ್ಟಕ್ಕೂ ಆಗಿದ್ದು ಏನು ಗೊತ್ತಾ?  ಚಿಕ್ಕಮಗಳೂರಿನ ಶೃಂಗೇರಿಯಲ್ಲಿರುವ ನಾಗಪ್ಪ ಶೇಟ್‌ ಎನ್ನುವವರ ಚಿನ್ನದಂಗಡಿಗೆ ಮಾಸ್ಕ್ ಧರಿಸಿದ್ದ ವ್ಯಕ್ತಿಯೊಬ್ಬ ಏಕಾಏಕಿ ನುಗ್ಗಿದ್ದ. ಈತನ ಕೈಯಲ್ಲಿ ಉದ್ದನೆಯ ಮಚ್ಚು ಬೇರೆ ಇತ್ತು. ಇಲ್ಲಿ  ಕೆಲಸಕ್ಕೆ ಇದ್ದವರೆಲ್ಲರೂ ಮಹಿಳೆಯರೇ. ಅದನ್ನು ಮೊದಲೇ ಅರಿತಿದ್ದ ಕಳ್ಳ, ರಾಜಾರೋಷದಿಂದ ಬಂದು ತನ್ನ ಕೈಯಲ್ಲಿದ್ದ ಮಚ್ಚನ್ನು ಝಳಪಿಸಿದ್ದಾನೆ. ಇದನ್ನು ನೋಡಿದ ಮಹಿಳಾ ಸಿಬ್ಬಂದಿ ಅಕ್ಷರಶಃ ಬೆದರಿ ಹೋಗಿದ್ದಾರೆ.

ಇನ್ನೇನು ಅಲ್ಲಿರುವ ಲಕ್ಷಾಂತರ ರೂಪಾಯಿ ಚಿನ್ನಾಭರಣ ತನ್ನದೇ ಎಂದು ಕನಸು ಕಾಣುತ್ತಿದ್ದ ವೇಳೆಯೇ ಮಹಿಳಾ ಸಿಬ್ಬಂದಿಯೊಬ್ಬರು ತಮ್ಮಲ್ಲಿರುವ ಎಲ್ಲಾ ಧೈರ್ಯವನ್ನೂ ಒಟ್ಟುಮಾಡಿಕೊಂಡು, ಸಮಯಸಾಧಿಸಿ, ಆ ಕಳ್ಳನನ್ನೇ ಚಚ್ಚಿಬಿಟ್ಟಿದ್ದಾರೆ.

ಅಷ್ಟಕ್ಕೂ ಆ ಮಹಿಳೆ ಮಾಡಿದ್ದೇನು ಗೊತ್ತಾ? ಈ ಮಹಿಳೆಯರು ತನಗೇನೂ ಮಾಡಲು ಸಾಧ್ಯವಿಲ್ಲ ಎಂದು ಕಳ್ಳ ಖುಷಿಯಲ್ಲಿ ಸ್ವಲ್ಪ ಅತ್ತ ನೋಡಿದ್ದಾಗ, ಈ ಮಹಿಳೆ ಅಲ್ಲಿರುವ ಖುರ್ಚಿಯನ್ನು ಎತ್ತಿಕೊಂಡು, ಆತನ ಕೈಯಲ್ಲಿ ಹರಿತವಾಗಿರುವ ಕತ್ತಿ ಇರುವುದನ್ನೂ ಲೆಕ್ಕಿಸದೇ ಆತನ ತಲೆಗೆ ಕುರ್ಚಿಯಿಂದ ಚಚ್ಚಿದ್ದಾರೆ.

ಏಕಾಏಕಿ ದಾಳಿಗೆ ಹೆದರಿದ ಕಳ್ಳ ತನ್ನ ಕೈಯಲ್ಲಿದ್ದ ಮೂರು ಸರವನ್ನು ಮಾತ್ರ ಎತ್ತಿಕೊಂಡು ಪರಾರಿಯಾಗಿದ್ದಾನೆ. ಮಹಿಳೆಯರ ಚೀರಾಟ ಕೇಳಿದ ಅಕ್ಕಪಕ್ಕದವರು ಆತನನ್ನು ಹಿಡಿಯುವ ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ. ಇನ್ನು ಈ ಎಲ್ಲಾ ದೃಶ್ಯಗಳು ಅಂಗಡಿಯಲ್ಲಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮಹಿಳೆಯ ಧೈರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!