Tuesday, June 23, 2026
Homeಅಪರಾಧಬೆಳ್ತಂಗಡಿ : ದೂರುದಾರ ವ್ಯಕ್ತಿ ಪೊಲೀಸ್ ಠಾಣೆಯಿಂದ ನಿರ್ಗಮನ,ವಕೀಲರ ಜೊತೆ ವಾಪಸ್ ತೆರಳಿದ ದೂರುದಾರ

ಬೆಳ್ತಂಗಡಿ : ದೂರುದಾರ ವ್ಯಕ್ತಿ ಪೊಲೀಸ್ ಠಾಣೆಯಿಂದ ನಿರ್ಗಮನ,ವಕೀಲರ ಜೊತೆ ವಾಪಸ್ ತೆರಳಿದ ದೂರುದಾರ

- Advertisement -
- Advertisement -

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ದಫನ ಮಾಡಿರುವುದಾಗಿ ದೂರು ನೀಡಿದ್ದ ವ್ಯಕ್ತಿ ಜಡ್ಜ್ ಮುಂದೆ ಜುಲೈ11 ರಂದು ಸಂಜೆ ಹೇಳಿಕೆ ನೀಡಿದ ಬಳಿಕ 6:30 ಕ್ಕೆ ಬೆಳ್ತಂಗಡಿ ಸರ್ಕಲ್‌ ಇನ್ಸ್ಪೆಕ್ಟರ್ ಕಚೇರಿಗೆ ತನಿಖೆಗಾಗಿ ವಕೀಲರ ಜೊತೆ ಕಾರಿನಲ್ಲಿ ತೆರಳಿದರು.

ಬಳಿಕ ಬಂಟ್ವಾಳ ಡಿವೈಎಸ್ಪಿ ವಿಜಯ ಪ್ರಸಾದ್ ಹಾಗೂ ಎಫ್ಎಸ್ಎಲ್ ತಂಡದ ಸೋಕೋ ಸಿಬ್ಬಂದಿಗಳ ಮುಂದೆ ದೂರುದಾರ ಮತ್ತು ವಕೀಲರು ಬ್ಯಾಗ್ ನಲ್ಲಿ ತಂದಿದ್ದ ಕೆಲವು ಮೃತದೇಹದ ಕಳೇಬರವನ್ನು ನೀಡಿದ್ದು ಅದನ್ನು ಮಹಜರು ನಡೆಸಿ ಪೊಲೀಸರು ವಶಕ್ಕೆ ಪಡೆದುಕೊಂಡರು.

ಮುಂದಿನ ತನಿಖೆಯ ಬಗ್ಗೆ ವಕೀಲರ ಜೊತೆ ಮಾತುಕತೆ ನಡೆಸಿ ರಾತ್ರಿ ಸುಮಾರು 11 ಗಂಟೆಗೆ ದೂರುದಾರನನ್ನು ಕರೆದುಕೊಂಡು ವಕೀಲರು ಕಾರಿನಲ್ಲಿ ವಾಪಸ್ ತೆರಳಿದ್ದಾರೆ.

- Advertisement -

Latest News

error: Content is protected !!