Monday, April 29, 2024
Homeಕರಾವಳಿಬೆಳ್ತಂಗಡಿಯ ಯುವಕನ ಶ್ರಮಕ್ಕೆ ಸಿಕ್ತು ಪ್ರತಿಫಲ: ಆಟೋ ಓಡಿಸುತ್ತಾ ಓದಿದ ನಿಯಾಜ್ ಪಣಕಜೆಗೆ ಡಾಕ್ಟರೇಟ್...

ಬೆಳ್ತಂಗಡಿಯ ಯುವಕನ ಶ್ರಮಕ್ಕೆ ಸಿಕ್ತು ಪ್ರತಿಫಲ: ಆಟೋ ಓಡಿಸುತ್ತಾ ಓದಿದ ನಿಯಾಜ್ ಪಣಕಜೆಗೆ ಡಾಕ್ಟರೇಟ್ ಪದವಿ

spot_img
- Advertisement -
- Advertisement -

ಬೆಳ್ತಂಗಡಿ :  ಸಾಧನೆ ಅನ್ನೋದು ಯಾರಪ್ಪನ ಸೊತ್ತಲ್ಲ. ಸಾದಿಸುವ ಛಲ ಇದ್ರೆ ಏನೂ ಬೇಕಾದ್ರೂ ಸಾಧಿಸ್ಬೋದು ಅನ್ನೋದಕ್ಕೆ ಬೆಸ್ಟ್ ಎಕ್ಸಾಂಪಲ್ ಈ ಯುವಕ.  

ಬೆಳ್ತಂಗಡಿಯ ನಿಯಾಜ್ ಪಣಕಜೆ ಎಂಬ ಯುವಕ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ. ನಿಯಾಜ್ ಪಣಕಜೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಣಕಜೆ ನಿವಾಸಿ. ನಿಯಾಜ್ ಬೆಳೆದು ಬಂದ ಹಾದಿ ಹೂವಿನ ಹಾದಿಯಾಗಿರಲಿಲ್ಲ. ಬಡತನವನ್ನೇ ಸವಾಲಾಗಿಸಿ ಕಲಿಕೆಯ ಏಕೈಕ ಉದ್ದೇಶದಿಂದ ಆಟೋ ಓಡಿಸಿ ತಮ್ಮ ಕನಸ್ಸನ್ನು ನನಸ್ಸು ಮಾಡಿಕೊಂಡಿದ್ದಾರೆ.

ಅನಾರೋಗ್ಯ ಪೀಡಿತ ತಂದೆ, ಬೀಡಿ ಕಟ್ಟಿ ಮಕ್ಕಳ ಹೊಟ್ಟೆಗೆ ಉಣಬಡಿಸುತ್ತಿದ್ದ ತಾಯಿ. ಇದರ ನಡುವೆ ವಿದ್ಯೆಯ ಹುಚ್ಚು ಆವರಿಸಿದ್ದ ನಿಯಾಜ್ ಶಾಲೆಯ ನಡುವೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಉನ್ನತ ಶಿಕ್ಷಣ ಪಡೆಯುವವರೆಗೂ ಕೂಲಿ ಕೆಲಸ ಮಾಡುತ್ತಿದ್ದರು. ಬಾವಿ ತೋಡುವುದು, ಮಣ್ಣು ಎತ್ತವುದು, ಪರಿಸರ ಸ್ವಚ್ಛತೆ, ಸೈಕಲ್ ರಿಪೇರಿ, ಗಾರೆ ಕೆಲಸ, ಮೀನು ಮಾರಾಟ, ಬೆಳಗಿನ ಜಾವ ಹಾಲು, ಪೇಪರ್ ಮಾರಾಟ, ಸಂಜೆ ಆಟೋ ರಿಕ್ಷಾದಲ್ಲಿ ದುಡಿಮೆ, ಉನ್ನತ ಶಿಕ್ಷಣ ವಿದ್ಯಾಭ್ಯಾಸದ ವೇಳೆ ಲಾಡ್ಜ್ ನಲ್ಲಿ ರಿಸೆಪ್ಷನಿಸ್ಟ್ ಹೀಗೆ ಎಲ್ಲಾ ಕೆಲಸ ಮಾಡಿ ನಿಯಾಝ್ ವಿದ್ಯಾಭ್ಯಾಸ ಪೂರೈಸಿದ್ದಾರೆ.

ಇದೀಗ ನಿಯಾಜ್ ಪಟ್ಟ ಎಲ್ಲಾ ಕಷ್ಟಕ್ಕೂ ಫಲ ಸಿಕ್ಕಿದ್ದು  ಡಾಕ್ಟರೇಟ್ ಪದವಿ ಪಡೆದು ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. ಹಾಗೇ ಊರಿಗೆ ಕೀರ್ತಿ ತಂದಿದ್ದಾರೆ. ಪ್ರಸ್ತುತ ಪ್ರಸ್ತುತ ಮಂಗಳೂರಿನ ಶ್ರೀನಿವಾಸ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಕಾಮರ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ನಿಯಾಜ್ ಮಂಡಿಸಿರುವ ರೋಲ್ ಆಫ್ ಕೋ-ಆಪರೇಟಿವ್ ಬ್ಯಾಂಕಿಗ್ ಇನ್ ಸೋಷಿಯೋ ಎಕಾನಾಮಿಕ್ ಡೆವಲಪ್‌ಮೆಂಟ್ ಆಫ್ ರೂರಲ್ ಮುಸ್ಲಿಂ ಕಮ್ಯನಿಟೀಸ್-ಎ ಸ್ಟಡಿ ಇನ್ ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್ ಆಫ್ ಕರ್ನಾಟಕ ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

- Advertisement -
spot_img

Latest News

error: Content is protected !!