- Advertisement -
- Advertisement -
ಬೆಳ್ತಂಗಡಿ: ನನ್ನ ಗೆಲುವಿನಲ್ಲಿ ಮಾಜಿ ಶಾಸಕ ವಸಂತ ಬಂಗೇರ ಅವರ ಪಾತ್ರವಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದ್ದಾರೆ.
ವಸಂತ ಬಂಗೇರ ಅವರು ಒಂದು ಕಾಲದಲ್ಲಿ ಬೆಳ್ತಂಗಡಿಯಲ್ಲಿ ಕಮಲ ಚಿಹ್ನೆಯನ್ನು ಅರಳಿಸಿ ಬಿಜೆಪಿಗಾಗಿ ಶ್ರಮಿಸಿದವರು. ಹಾಗಾಗಿ ನಮ್ಮ ಇಬ್ಬರ ಸೇವೆಯೂ ಈ ಬೆಳ್ತಂಗಡಿ ಜನತೆಗಾಗಿ ಅಗಿದ್ದರಿಂದ ಅವರ ಶ್ರಮವನ್ನು ಗೌರವಿಸಿ, ಎಷ್ಟೇ ಟೀಕೆ ಮಾಡಿದರು ಪರವಾಗಿಲ್ಲ ಅದನ್ನು ಸ್ವೀಕರಿಸುತ್ತೇನೆ ಎಂದು ಶಾಸಕ ಹರೀಶ್ ಪೂಂಜ ಹೇಳಿದ್ದಾರೆ..
ಬೆಳ್ತಂಗಡಿ ವಿಧಾನಸಭೆ ಚುನಾವಣೆಯಲ್ಲಿ ಶಾಸಕ ಹರೀಶ್ ಪೂಂಜ ಅವರು ವಿಜಯಿಯಾಗಿ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆ ಬೆಳ್ತಂಗಡಿಯಿಂದ ಉಜಿರೆವರೆಗೆ ಕಾರ್ಯಕರ್ತರು ಹಮ್ಮಿಕೊಂಡ ವಿಜಯೋತ್ಸವ ಬೈಕ್ ರ್ಯಾಲಿ, ಬಳಿಕ ಉಜಿರೆ ಶಾರದಾ ಮಂಟಪದಲ್ಲಿ ನಡೆದ ವಿಕಾಸ ಸಂಪರ್ಕ ಅಭಿಯಾನದಲ್ಲಿ ಈ ಮಾತು ಹೇಳಿದ್ದಾರೆ.
- Advertisement -


