ಬೆಳ್ತಂಗಡಿ : ಕೊಯ್ಯೂರು ಗ್ರಾಮದ ಪಿಜಕಲ ನಿವಾಸಿ ಸುಧಾಕರ ಗೌಡ (56ವ) ಎಂಬ ವ್ಯಕ್ತಿ ಮಕ್ಕಳಿಲ್ಲದ ಕೊರಗು ಮತ್ತು ಪತ್ನಿಯ ಇತ್ತೀಚಿಗೆ ಅನಾರೋಗ್ಯದ ಚಿಂತೆಯಲ್ಲಿ ನೊಂದು ಖಿನ್ನತೆಗೊಳಗಾಗಿದ್ದು, ಮನೆಯಲ್ಲಿ ಒಬ್ಬರೇ ಇದಿದ ವೇಳೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.6 ರಂದು ನಡೆದಿದೆ.
ಸಣ್ಣಪುಟ್ಟ ಅಂಗಡಿ ಹೊಂದಿದ್ದು, ಜೊತೆಗೆ ಮಲ್ಲಿಗೆ ಕೃಷಿ ಮಾಡಿ ಕೊಂಡಿದ್ದರು. ಗಿಡಗಳಿಗೆ ಸಿಂಪಡಿಸಲು ತಂದ್ದಿರಿಸಿದ ಕ್ರಿಮಿನಾಶಕವನ್ನು ಸೇವಿಸಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಾಲ್ಕು ತಿಂಗಳ ಹಿಂದೆ ಅವರ ಪತ್ನಿ ಅನಾರೋಗ್ಯಕ್ಕೊಳಗಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ತವರು ಮನೆಯಲ್ಲಿ ಮತ್ತು ತಂಗಿ ಮನೆಯಲ್ಲಿದ್ದರು.
ಮೊದಲೇ ಮಕ್ಕಳಿಲ್ಲದ ಚಿಂತೆಯಲ್ಲಿದ್ದು ನಾಲ್ಕು ತಿಂಗಳಿನಿಂದ ಮನೆಯಲ್ಲಿ ಪತ್ನಿ ಇಲ್ಲದೆ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಕೊರಗಿನಿಂದ ನೊಂದಿದ್ದರು ಎನ್ನಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತಪಟ್ಟ ಸುಧಾಕರ್ ಗೌಡ ಅವರು ಬೆಳ್ತಂಗಡಿಯ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಗಂಗಾಧರ ಗೌಡ ಅವರ ಸಹೋದರಿಯ ಮಗನಾಗಿದ್ದಾರೆ.


