Friday, June 5, 2026
Homeಕರಾವಳಿನಾಲ್ಕು ಜನ ಅಪರಿಚಿತರಿಂದ ಉಜಿರೆ ಗ್ರಾ.ಪಂ ಸದಸ್ಯ ಮತ್ತು ಆತನ ಗೆಳೆಯರಿಬ್ಬರ ಮೇಲೆ ಹಲ್ಲೆ

ನಾಲ್ಕು ಜನ ಅಪರಿಚಿತರಿಂದ ಉಜಿರೆ ಗ್ರಾ.ಪಂ ಸದಸ್ಯ ಮತ್ತು ಆತನ ಗೆಳೆಯರಿಬ್ಬರ ಮೇಲೆ ಹಲ್ಲೆ

- Advertisement -
- Advertisement -

ಬೆಳ್ತಂಗಡಿ : ಶುಕ್ರವಾರ ಮದ್ಯಾಹ್ನ 1 ಗಂಟೆ ಸಮಯದಲ್ಲಿ ಬೆಳ್ತಂಗಡಿ ಗ್ರಾಮದ ಉಜಿರೆ ಅತ್ತಾಜೆ ನಿವಾಸಿ ಹಾಗೂ ಉಜಿರೆ ಗ್ರಾ.ಪಂ ಬಿಜೆಪಿ ಬೆಂಬಲಿತ ಸದಸ್ಯರಾಗಿರುವ ಸದಾಶಿವ (25) ಮತ್ತು ಗೆಳೆಯರಾದ ಮಧುಕರ ಹಾಗೂ ದಿನೇಶ್ ಮೂವರು ಸೇರಿ ಬೆಳ್ತಂಗಡಿ ತಾಲೂಕು ಕಡಿರುದ್ಯಾವರ ಗ್ರಾಮದ ಎರ್ಮಾಳಪಲ್ಕೆ ಎಂಬಲ್ಲಿರುವ ನೇತ್ರಾವತಿ ಹೊಳೆಯ ನೀರಿನಲ್ಲಿ ಈಜಲು ಹೋದಾಗ ಅಲ್ಲಿಗೆ ಬಂದ 4 ಜನ ಅಪರಿಚಿತ ವ್ಯಕ್ತಿಗಳು ಸದಾಶಿವ ಮತ್ತು ಗೆಳೆಯರಿಬ್ಬರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ . ಈ ವೇಳೆ ಈ ಮೂವರು ಅಲ್ಲಿಂದ ಹೋಗಲು ಪ್ರಯತ್ನಿಸಿದಾಗ ಅವರನ್ನು ತಡೆದು ನಿಲ್ಲಿಸಿ ನಾಲ್ಕು ಜನ ಅಪರಿಚಿತರು ಸೇರಿ ಕೈಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಬೆಳ್ತಂಗಡಿ ಠಾಣೆಗೆ ಬಂದು ದೂರು ನೀಡಿದ್ದು ಅದರಂತೆ ಐಪಿಸಿ ಸೇಕ್ಷನ್ 341, 504, 323 ಜೊತೆಗೆ 34 ಅಡಿ ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!