Saturday, June 6, 2026
Homeಕರಾವಳಿವಿಟ್ಲ ಠಾಣಾ ಎಸ್.ಐ ವಿನೋದ್ ಎಸ್. ರೆಡ್ಡಿ ಉತ್ತರಕನ್ನಡ ಜಿಲ್ಲೆಯ ರಾಮನಗರ ಠಾಣೆಗೆ ವರ್ಗ

ವಿಟ್ಲ ಠಾಣಾ ಎಸ್.ಐ ವಿನೋದ್ ಎಸ್. ರೆಡ್ಡಿ ಉತ್ತರಕನ್ನಡ ಜಿಲ್ಲೆಯ ರಾಮನಗರ ಠಾಣೆಗೆ ವರ್ಗ

- Advertisement -
- Advertisement -

ಮಂಗಳೂರು : ವಿಟ್ಲ ಠಾಣಾ ಎಸ್. ಐ ವಿನೋದ್ ಎಸ್. ರೆಡ್ಡಿಯವರನ್ನು ಉತ್ತರಕನ್ನಡ ಜಿಲ್ಲೆಯ ಕಾಮತ್ತೂಸು, ರಾಮನಗರ ಠಾಣೆಗೆ ವರ್ಗಾವಣೆಗೊಳಿಸಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ರವರು ಆದೇಶ ಹೊರಡಿಸಿದ್ದಾರೆ.

 2017ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡ ವಿನೋದ್ ಎಸ್. ರೆಡ್ಡಿಯವರು ಆ ಬಳಿಕ ಮಂಗಳೂರು ಕೇಂದ್ರ ಸ್ಥಾನದಲ್ಲಿ ಪ್ರೊಬೆಷನರಿ ಎಸ್.ಐ. ಆಗಿ ಕರ್ತವ್ಯ ಆರಂಭಿಸಿದರು. ಬಳಿಕ ಉಡುಪಿ ಜಿಲ್ಲೆಯ ಕಾಪು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ 2019ರಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆಗೆ ಪ್ರೊಬೆಷನರಿ ಎಸ್.ಐ ಆಗಿ ವರ್ಗಾವಣೆಗೊಂಡು ಬಂದಿದ್ದರು.

ವಿಟ್ಲ ಠಾಣಾ ಎಸ್ ಐ ಆಗಿದ್ದ ಯಲ್ಲಪ್ಪರವರ ವರ್ಗಾವಣೆಗೊಂಡ ಬಳಿಕ ವಿನೋದ್ ಎಸ್. ರೆಡ್ಡಿರವರನ್ನು ವಿಟ್ಲ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ವಿನೋದ್ ಎಸ್. ರೆಡ್ಡಿ ರವರು ಮೂಲತಃ ಬಾಗಲಕೋಟೆಯವರಾಗಿದ್ದು ಮೆಕ್ಯಾನಿಕಲ್ ಇಂಜಿನಿಯರ್ ಮಾಡಿ ನಂತರ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದಾರೆ. ಇತ್ತೀಚೆಗಷ್ಟೇ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.ವಿನೋದ್ ರೆಡ್ಡಿ ಅವರಿಂದ ತೆರವಾದ ವಿಟ್ಲ ಠಾಣೆಯ ಪಿಎಸ್ಐ ಸ್ಥಾನಕ್ಕೆ ಇನ್ನೂ ಯಾರನ್ನು ನೇಮಕ ಮಾಡಿಲ್ಲ .

- Advertisement -

Latest News

error: Content is protected !!