Monday, June 15, 2026
HomeUncategorizedಬೆಳ್ತಂಗಡಿ : ಎರಡು ವರ್ಷದ ಮಗು ಸೌದಿ ಅರೇಬಿಯಾದಲ್ಲಿ ಕೊನೆಯುಸಿರು

ಬೆಳ್ತಂಗಡಿ : ಎರಡು ವರ್ಷದ ಮಗು ಸೌದಿ ಅರೇಬಿಯಾದಲ್ಲಿ ಕೊನೆಯುಸಿರು

- Advertisement -
- Advertisement -

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಅಜಿಕುರಿ ನಿವಾಸಿ ಸಿವಿಲ್ ಗುತ್ತಿಗೆದಾರರಾಗಿದ್ದ ದಿ. ಯಾಕೂಬ್ ಅವರ ಪುತ್ರ ಹೈದರ್ ಅಲಿ ಅವರ ಮಗ ಮುಹಮ್ಮದ್ ಅಭಿಯಾನ್ (2) ಅವರು ಒಂದೇ ದಿನದ ಜ್ವರದಿಂದ ಬಳಲಿ ಸೌದಿ ಅರೇಬಿಯಾದ ಬುರೈದಾದಲ್ಲಿ ಮಾ.2 ರಂದು ಕೊನೆಯುಸಿರೆಳೆದಿದೆ.

ಹೈದರ್ ಅಲಿ ಮತ್ತು ಮಹ್‌ರೂಫಾ ದಂಪತಿಯ ಎರಡು ಗಂಡು ಮತ್ತು ಒಂದು ಹೆಣ್ಣು ಮಕ್ಕಳ ಪೈಕಿ ಕೊನೆಯವನಾಗಿರುವ ಮುಹಮ್ಮದ್ ಅಭಿಯಾನ್ ಅವರಿಗೆ ಕೇವಲ ಒಂದು ದಿನದ ಮಟ್ಟಿಗೆ ಜ್ವರ ಕಾಣಿಸಿಕೊಂಡಿತ್ತು. ತಕ್ಷಣವೇ ಮನೆಯವರು ಮಗುವಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ನಿನ್ನೆಯ ದಿನ ಜ್ಬರ ಉಲ್ಬಣಿಸಿದ್ದರಿಂದ ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆಯೇ ಮಗು ಅಸುನೀಗಿದೆ ಎಂದು ತಿಳಿದುಬಂದಿದೆ.

ಬಾಲಕನ ತಂದೆ ಹೈದರ್ ಅಲಿ ಅವರು ಬಿಲ್ಡಿಂಗ್ ಕೆಲಸ ನೋಡಿಕೊಂಡು ಸೌದಿಯಲ್ಲೇ ಇದ್ದಾರೆ. ಪತ್ನಿ ಮಕ್ಕಳು ಮಾತ್ರವಲ್ಲದೆ ಪತ್ನಿಯ ಕುಟುಂಬಸ್ಥರೂ ಕೂಡ ಬಹುತೇಕ ಮಂದಿ ಸೌದಿಯಲ್ಲೇ ಅಕ್ಕ ಪಕ್ಕ ಜೊತೆಯಲ್ಲೇ ನೆಲೆಸಿದ್ದಾರೆ.

ಮೃತ ಬಾಲಕ ತಂದೆ ತಾಯಿ ಮಾತ್ರವಲ್ಲದೆ ಅಕ್ಕ
ಅಲೀನಾ ಫಾತಿಮಾ, ಅಣ್ಣ ಮುಹಮ್ಮದ್ ಅಯಾನ್ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

ಮೃತ ಮಗುವಿನ ಅಂತ್ಯಸಂಸ್ಕಾರ ಸೌದಿ ಕಾನೂನು ಪ್ರಕ್ರೀಯೆ ನಡೆದ ಬಳಿಕ ಸೌದಿ ಅರೇಬಿಯಾದಲ್ಲೇ ಮಾ.4 ರಂದು ಭಾರತೀಯ ಕಾಲಮಾನದಂತೆ ಮಧ್ಯಾಹ್ನದ ಒಳಗೆ ನಡೆಯಲಿದೆ ಎಂದು ಮಗುವಿನ ದೊಡ್ಡಪ್ಪ ಅಜಿಕುರಿ ಶರೀಫ್ ಸಖಾಫಿ ತಿಳಿಸಿದ್ದಾರೆ.

- Advertisement -

Latest News

error: Content is protected !!