Saturday, June 27, 2026
Homeಕರಾವಳಿಬೆಳ್ತಂಗಡಿ: ಮೀನು ಹಿಡಿಯಲು ಹೋದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು

ಬೆಳ್ತಂಗಡಿ: ಮೀನು ಹಿಡಿಯಲು ಹೋದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು

- Advertisement -
- Advertisement -

ಬೆಳ್ತಂಗಡಿ: ನಾಲ್ಕು ಜನ ಸ್ನೇಹಿತರ ಜೊತೆ ಮೀನು ಹಿಡಿಯಲು ಹೋದ ವ್ಯಕ್ತಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ತಾಲೂಕಿನ ನೆರಿಯ ಗ್ರಾಮದ ಪುಲ್ಲಾಜೆ ಹೊಳೆಯಲ್ಲಿ ನಡೆದಿದೆ.

ಇಂದು ಬೆಳಗ್ಗೆ ನಾಲ್ಕು ಸ್ನೇಹಿತರಾದ ಕುಶಾಲಪ್ಪ ಗೌಡ , ತನಿಯಪ್ಪ ಮುಗೇರ,ರಾಜು ಮೂಲ್ಯ ಜೊತೆ ಕೃಷ್ಣಪ್ಪ ಮಲೆಕುಡಿಯ ನೆರಿಯದ ಪುಲ್ಲಾಜೆ ಹೊಳೆಗೆ ಮೀನು ಹಿಡಿಯಲು ಹೋಗಿದ್ದು ಅದರಲ್ಲಿ ಒಬ್ಬ ತೋಟತ್ತಾಡಿ ನಿವಾಸಿ ಕೃಷ್ಣಪ್ಪ ಮಲೆಕುಡಿಯ(38) ನೀರಿನ ರಭಸಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.

ಶವ ನೀರಿನಿಂದ ಮೇಲೆಕ್ಕೆ ತೆಗೆಯಲಾಗಿದೆ. ಘಟನೆ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!