Saturday, May 18, 2024
HomeUncategorized'ದ್ವಿತೀಯ PUC ಕಾಲೇಜು' ಆರಂಭ...! ಕಡ್ಡಾಯ 'ಮಾರ್ಗಸೂಚಿ ಕ್ರಮ'ಗಳನ್ನು ಪಾಲನೆ ಮಾಡುವಂತೆ ಜಿಲ್ಲಾಧಿಕಾರಿ...

‘ದ್ವಿತೀಯ PUC ಕಾಲೇಜು’ ಆರಂಭ…! ಕಡ್ಡಾಯ ‘ಮಾರ್ಗಸೂಚಿ ಕ್ರಮ’ಗಳನ್ನು ಪಾಲನೆ ಮಾಡುವಂತೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮನವಿ..!

spot_img
- Advertisement -
- Advertisement -

ಮಂಗಳೂರು: ಕೊರೋನಾ ಪಾಸಿಟಿವಿಟಿ ದರ ಹೆಚ್ಚಳದಿಂದಾಗಿ ಆಗಸ್ಟ್ 23ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಂಭಗೊಳ್ಳಬೇಕಿದ್ದಂತ 9 ರಿಂದ ದ್ವಿತೀಯ ಪಿಯುಸಿ ತರಗತಿಗಳು ಆರಂಭಗೊಂಡಿರಲಿಲ್ಲ. ಇದೀಗ ಕೊರೋನಾ ಪಾಸಿಟಿವಿಟಿ ದರ ಕಡಿಮೆಗೊಂಡ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿಯನ್ನು ಸೆಪ್ಟೆಂಬರ್.1ರಿಂದ ಆರಂಭಗೊಳಿಸಲಾಗುತ್ತಿದೆ. ಇಂತಹ ಕಾಲೇಜು ಆರಂಭಕ್ಕಾಗಿ ಮಾರ್ಗಸೂಚಿಯನ್ನು ಕೂಡ ಪ್ರಕಟಿಸಲಾಗಿದೆ.

ಈ ಕುರಿತಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಮಾರ್ಗಸೂಚಿ ಹೊರಡಿಸಿದದು, ತರಗತಿಗಳು ನಡೆಯುತ್ತಿರುವಾಗ ಕೊರೋನಾ ನಿಯಂತ್ರಣ ಮಾರ್ಗಸೂಚಿ ಕ್ರಮಗಳನ್ನು ಅನುಷ್ಠಾನಗೊಳಿಸೋ ಜವಾಬ್ದಾರಿ ಕಾಲೇಜಿನ ಪ್ರಾಂಶುಪಾಲರದ್ದು ಆಗಿದೆ.

  • ಕೇರಳದಿಂದ ಬರೋ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಏಳ ಕ್ವಾರಂಟೈನ್ ಮಾಡಬೇಕು. ಹಾಗು ಕಾಲೇಜುಗಳಲ್ಲಿ ಪ್ರತ್ಯೇಕ ಕೋರೋನಾ ಆರೈಕೆ ಕೇಂದ್ರ ತೆರೆಯಬೇಕು ಎಂದು ತಿಳಿಸಿದ್ದಾರೆ.
  • ಪಿಯುಸಿ ತರಗತಿಗೆ ಹಾಜರಾಗುತ್ತಿರುವಂತ ವಿದ್ಯಾರ್ಥಿಗಳಿಗೆ ಕೊರೋನಾ ನೆಗೆಟಿವ್ ವರದಿ ಹಾಜರುಪಡಿಸೋದು ಕಡ್ಡಾಯವಾಗಿದೆ.
  • ಕ್ವಾರಂಟೈನ್ ನಲ್ಲಿ ಇರೋ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿ ವ್ಯವಸ್ಥೆ ಮಾಡುವಂತೆಯೂ ಸೂಚಿಸಲಾಗಿದೆ.

*ಪದವಿ ಪೂರ್ವ ಕಾಲೇಜುಗಳ ಬೋಧಕ, ಬೋಧಕೇತರ ಸಿಬ್ಬಂದಿಗಳು ಕೊರೋನಾ ನೆಗೆಟಿವ್ ವರದಿ ಕಡ್ಡಾಯವಾಗಿದೆ.

  • ಕೇರಳದಿಂದ ಆಗಮಿಸುವ ವಿದ್ಯಾರ್ಥಿಗಳನ್ನು ಪ್ರತಿ ಏಳು ದಿನಗಳಿಗೊಮ್ಮೆ ಕೊರೋನಾ ನೆಗೆಟಿವ್ ಪರೀಕ್ಷಾ ವರದಿಯನ್ನು ಹಾಜರುಪಡಿಸೋ ಮೂಲಕ ತರಗತಿಗೆ ಹಾಜರಾಗಲು ತಿಳಿಸಲಾಗಿದೆ.
  • ಕೇರಳದಿಂದ ಬರೋ ಬೋಧಕ, ಬೋಧಕೇತರ ಸಿಬ್ಬಂದಿಗಳು ಎರಡು ಡೋಸ್ ಲಸಿಕೆ ಪಡೆದಿದ್ದರೂ, ಒಂದೇ ನಿಯಮ ಪಾಲಿಸಬೇಕು.
  • ಕೊರೋನಾ ನಿಯಂತ್ರಣಕ್ಕಾಗಿ ಕಾಲೇಜು ಪ್ರಾಂಶುಪಾಲರು ಡಿಡಿಪಿಯು, ತಾಲೂಕು ಆರೋಗ್ಯಾಧಿಕಾರಿಗಳನ್ನು ಒಳಗೊಂಡ ಆಯಾ ಕಾಲೇಜುಗಳ ತಂಡ ರಚಿಸಿಕೊಳ್ಳುವಂತೆ ಸೂಚಿಸಲಾಗಿದೆ.

- Advertisement -
spot_img

Latest News

error: Content is protected !!